Shivamogga evening news today ಬಾರ್‌ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ
Shivamogga evening news today ಶಿವಮೊಗ್ಗ ನಗರದ ಸೋಮಿನಕೊಪ್ಪದ ಬಾರ್ ಅಂಡ್ ರೆಸ್ಟೋರೆಂಟ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದೆ. ಅಷ್ಟೆಅಲ್ಲದೆ ಈ ಗಲಾಟೆಯ ನಡುವೆ, ಓರ್ವನ ತಲೆಗೆ ಬಿಯರ್ ಬಾಟಲಿಯಿಂದ (Beer Bottle) ಹಲ್ಲೆ ನಡೆಸಲಾಗಿದೆ. ಆತನಿಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಸೋಮವಾರ ಘಟನೆ ನಡೆದಿದೆ. ಈತನೇ ಸ್ನೇಹಿತರೇ ಹಲ್ಲೆ ಮಾಡಿರುವುದಾಗಿ ಗೊತ್ತಾಗಿದೆ. ಬಾರ್‌ನಲ್ಲಿ ಕುಡಿಯುತ್ತಿದ್ದಾಗ, ಯಾವುದೋ ವಿಚಾರಕ್ಕೆ ಜಗಳವಾಗಿ ಬಾಟಲಿಯಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.
Shivamogga evening news today ಗೂಗಲ್ ರಿವ್ಯೂ ಹೆಸರಿನಲ್ಲಿ ₹25.92 ಲಕ್ಷ ವಂಚನೆ
ಗೂಗಲ್‌ನಲ್ಲಿ ಹೊಟೇಲ್‌ಗಳಿಗೆ ರಿವ್ಯೂ (Review) ನೀಡಿದರೆ, ದುಡ್ಡು ಸಿಗುತ್ತದೆ ಎಂದು ನಂಬಿಸಿ ಯುವಕನೊಬ್ಬನಿಗೆ ಬರೋಬ್ಬರಿ ₹25.92 ಲಕ್ಷ ರೂಪಾಯಿ ವಂಚಿಸಲಾಗಿದೆ. ಆರಂಭದಲ್ಲಿ ಟೆಲಿಗ್ರಾಂ ಗ್ರೂಪ್ ಒಂದರಲ್ಲಿ ಬಂದ ಲಿಂಕ್ ಮೂಲಕ ಯುವಕನ ಸಂಪರ್ಕಕ್ಕೆ ಬಂದ್ ಆನ್ಲೈನ್ ಸ್ಕ್ಯಾಮರ್ಗಳು, ಗೂಗಲ್‌ನಲ್ಲಿ ತಾವು ತೋರಿಸುವ ಹೋಟೆಲ್ಗಳಿಗೆ ರಿವ್ಯೂ ನೀಡಿದರೆ ಹಣ ಸಿಗುತ್ತದೆ ಎಂದು ಆಮೀಷವೊಡ್ಡಿದ್ದಾರೆ. ಆನಂತರ ಇಲ್ಲದ ಆಮೀಷವೊಡ್ಡಿ ಯುವಕನಿಂದ ಹಣವನ್ನು ಹಂತ ಹಂತವಾಗಿ ₹25.92 ಲಕ್ಷವನ್ನು ತಮ್ಮ ಅಕೌಂಟ್ಗೆ ಹಾಕಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ (CEN Police Station) ತನಿಖೆ ನಡೆಯುತ್ತಿದೆ.

ಭದ್ರಾವತಿಯಲ್ಲಿ ಸೈಬರ್ ಕಳ್ಳರ ಕೈಚಳಕ
ಭದ್ರಾವತಿಯಲ್ಲಿ ನಿವೃತ್ತ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹5.70 ಲಕ್ಷ ಹಣ ಆನ್‌ಲೈನ್‌ನಲ್ಲಿ (Online) ವರ್ಗಾವಣೆಯಾಗಿದೆ. ಮೊಬೈಲ್ ಬ್ಯಾಂಕಿಂಗ್ ಆಪ್ ಅನ್ನು ಹ್ಯಾಕ್ (Hack) ಮಾಡಿ ಈ ಕೃತ್ಯವೆಸಗಲಾಗಿದೆ ಎಂದು ನಂಬಲಾಗಿದೆ. ಈ ಕುರಿತಾಗಿ ಬ್ಯಾಲೆನ್ಸ್ ಟ್ರಾನ್ಸಫರ್ ಆಗಿರುವ ಎಸ್ಎಂಎಸ್ ನೋಡಿ ಅನುಮಾನಗೊಂಡ ಹಿರಿಯರು, ಬಳಿಕ ಬ್ಯಾಂಕ್ನಲ್ಲಿ ವಿಚಾರಿಸಿದ್ದಾರೆ. ಆ ಬಳಿಕ ಆಪ್ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಕೊನೆಯಲ್ಲಿ ಸೈಬರ್ ಕೇಸ್ಗೆ ಸಂಬಂಧಿಸಿದಂತೆ ಶಿವಮೊಗ್ಗದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ (CEN Police Station) ಪ್ರಕರಣ ದಾಖಲಾಗಿದ್ದು, ಸೈಬರ್ ವಿಭಾಗದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Shivamogga evening news today
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
