ಹೀಗೂ ಹ್ಯಾಕ್ ಮಾಡ್ತಾರೆ, ಹಾಗೂ ಮೋಸ ಮಾಡ್ತಾರೆ! ಶಿವಮೊಗ್ಗದಲ್ಲಿ ಏನೆಲ್ಲಾ ನಡೀತು ನೋಡಿ

ajjimane ganesh

Big news today Shivamogga july 16 ಶಿವಮೊಗ್ಗದಲ್ಲಿ ಗಾಂಜಾ ದಂಧೆ ಭೇದಿಸಿದ ಪೊಲೀಸರು: ಇಬ್ಬರ ಬಂಧನ

ಶಿವಮೊಗ್ಗ: ನಗರದ ವಡ್ಡಿನಕೊಪ್ಪದ ನಿರ್ಮಾಣ ಹಂತದ ಲೇಔಟ್‌ನ ರಸ್ತೆಯಲ್ಲಿ ಗಾಂಜಾ ಪ್ಯಾಕಿಂಗ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆಶ್ರಯ ಬಡಾವಣೆಯ ಕಾರ್ತಿಕ್ (21) ಮತ್ತು ಕಡೇಕಲ್‌ನ ರಾಜು (24) ಬಂಧಿತ ಆರೋಪಿಗಳು. ಪೊಲೀಸರು ದಾಳಿ ನಡೆಸಿದಾಗ, ಆರೋಪಿಗಳು ಸಣ್ಣ ಸಣ್ಣ  ಪ್ಯಾಕೆಟ್​ನಲ್ಲಿ ಗಾಂಜಾ ತುಂಬಿಸುತ್ತಿದ್ದರು. ಅವರಿಂದ 1.70 ಲಕ್ಷ ರೂ. ಮೌಲ್ಯದ 5.780 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಫೋನ್ ಪೇ ಮೂಲಕ ಕರೆಂಟ್ ಬಿಲ್ ಕಟ್ಟಿದ ವ್ಯಕ್ತಿಗೆ ಆನ್‌ಲೈನ್ ವಂಚನೆ Big news today Shivamogga july 16

ಮೊಬೈಲ್ ನಂಬರ್ ಹ್ಯಾಕ್ ಮಾಡಿ, ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ವಂಚನೆ ನಡೆಸಿರುವ ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗದ ವ್ಯಕ್ತಿಯೊಬ್ಬರು ಈ ಸಂಬಂಧ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಾಖಲಾಗಿರುವ ಎಫ್​ಐಆರ್ ಪ್ರಕಾರ, ಸಂತ್ರಸ್ತರು ತಿಂಗಳು 754 ರೂ. ವಿದ್ಯುತ್ ಬಿಲ್ ಅನ್ನು ಫೋನ್ ಪೇ ಮೂಲಕ ಪಾವತಿಸಿದ್ದರು. ಆ ಸಮಯದಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ 94,624 ರೂ. ಬ್ಯಾಲೆನ್ಸ್ ಇತ್ತು ಎಂದು ತೋರಿಸಲಾಗಿತ್ತು. ಆದರೆ, ಕೆಲ ದಿನಗಳ ನಂತರ ಬೇರೆಡೆ ಫೋನ್ ಪೇ ಸ್ಕ್ಯಾನರ್ ಬಳಸಿದಾಗ ಸರಿಯಾಗಿ ಕೆಲಸ ಮಾಡಲಿಲ್ಲ, ಹಾಗಾಗಿ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದಾದ, ಅವರ ಅಕೌಂಟ್​ನಲ್ಲಿ ಕೇವಲ 4,025 ರೂ. ಮಾತ್ರ ಇತ್ತು. ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ, ಯುಪಿಐ ಮೂಲಕ ಹಲವು ಬಾರಿ ಒಟ್ಟು 90,599 ರೂ. ವರ್ಗಾವಣೆ ಆಗಿರುವುದು ಗೊತ್ತಾಗಿದೆ.ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ.   

Big news today Shivamogga Historic Gathering Malnad Seers Convene Today in Shivamogga shivamogga bhadravati davanagere today post , Missing Mother-in-Law Found in Davangere; Affair Suspected with Son-in-Law,Tragedy in Soraba Schools Colleges Closed on June 25 SIMS Medical Collegesuddi today
shivamogga bhadravati davanagere suddi today

ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3‌

Big news today Shivamogga july 16ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿ ಹಾಜರು ಯತ್ನ: ಶಿಕಾರಿಪುರದಲ್ಲಿ ದೂರು ದಾಖಲು೩

ಶಿಕಾರಿಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ 3ರಲ್ಲಿ ಒಬ್ಬ ಅಭ್ಯರ್ಥಿಯ ಬದಲು ಮತ್ತೊಬ್ಬ ಯುವಕ ಪರೀಕ್ಷೆಗೆ ಹಾಜರಾಗಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿಕಾರಿಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ 3ರ ವಿಜ್ಞಾನ ಪರೀಕ್ಷೆಗೆ ವಿದ್ಯಾರ್ಥಿಯ ಬದಲು ಮತ್ತೊಬ್ಬ ಯುವಕ ಹಾಜರಾಗಿದ್ದನು. ಪ್ರವೇಶ ಪರೀಕ್ಷೆ ಪರಿಶೀಲನೆ ವೇಳೆ, ಹಾಲ್ ಟಿಕೆಟ್‌ನಲ್ಲಿ ವಿದ್ಯಾರ್ಥಿಯ ಫೋಟೋ ಮೇಲೆ ಇಂಕ್ ಹಾಕಿ ಮರೆ ಮಾಚಲಾಗಿತ್ತು ಎಂದು ಆರೋಪಿಸಲಾಗಿದೆ. ಮೂಲ ಪ್ರತಿಯನ್ನು ತಂದು ಪರಿಶೀಲಿಸಿದಾಗ, ವಿದ್ಯಾರ್ಥಿಯ ಬದಲು ಬೇರೊಬ್ಬ ಯುವಕ ಪರೀಕ್ಷೆಗೆ ಹಾಜರಾಗಿರುವುದು ದೃಢಪಟ್ಟಿದೆ ಈ ಘಟನೆ ಕುರಿತು ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

bommanakatte murder case sp mithun kumar
bommanakatte murder case sp mithun kumar

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

Big news today Shivamogga july 16 ಶಿವಮೊಗ್ಗದಲ್ಲಿ ವೃದ್ಧೆಯ ಮಾಂಗಲ್ಯ ಸರ ಕದ್ದಿದ್ದ ಆರೋಪಿಗಳ ಬಂಧನ

ಶಿವಮೊಗ್ಗ: ವಿದ್ಯಾನಗರದ ಗಣಪತಿ ಲೇಔಟ್‌ನಲ್ಲಿ ಸೈಟ್ ಕೇಳುವ ನೆಪದಲ್ಲಿ ವೃದ್ಧರ ಮನೆಗೆ ನುಗ್ಗಿ, ಅನಾರೋಗ್ಯದ ವೃದ್ಧೆಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 3 ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಗಣಪತಿ ಲೇಔಟ್‌ನಲ್ಲಿ ವಾಸಿಸುವ ನಾಗರಾಜ್ ದಂಪತಿಗಳ ಮನೆಗೆ ಸೈಟ್ ಬಗ್ಗೆ ವಿಚಾರಿಸುವ ನೆಪದಲ್ಲಿ ನುಗ್ಗಿದ ಕಳ್ಳರು ವೃದ್ದ ನಾಗರಾಜ್ ಅವರ ಪತ್ನಿಯ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಂ 400 ಮಿಲಿ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕದ್ದೊಯ್ದಿದ್ದರು. ಈ ಸಂಬಂ ಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರೀಶ್ ಕೆ. ಪಟೇಲ್, ಪಿ.ಎಸ್.ಐ ಸಂತೋಷ್ ಕುಮಾರ್ ಬಾಗೋಜಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಚರಣೆ ನಡೆಸಿತ್ತು.  ಸದ್ಯ ಪ್ರಕರಣ ಸಂಬಂಧ  ಭದ್ರಾವತಿ ನಿವಾಸಿಯಾದ ಆರೋಪಿ ವಸಂತ್ ರಾಜ್​ನನ್ನ ಬಂಧಿಸಿ  45 ಗ್ರಾಂ 720 ಮಿಲಿ ಬಂಗಾರದ ಮಾಂಗಲ್ಯ ಸರ (ಅಂದಾಜು ಬೆಲೆ ₹4,50,000/-), ವಿವೋ ಕಂಪನಿಯ 01 ಮೊಬೈಲ್ (ಅಂದಾಜು ಬೆಲೆ ₹24,000/-) ಮತ್ತು ಕೃತ್ಯಕ್ಕೆ ಬಳಸಿದ ಸ್ಪ್ಲೆಂಡರ್ ಬೈಕ್ (ಮೌಲ್ಯ ₹26,000/-) ಸೇರಿ ಒಟ್ಟು ₹5,00,000/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ 

Big news today Shivamogga july 16

 

Share This Article