Shocking Husband Bites Wifes Nose 11 ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ ಪತಿರಾಯ!ಎಂತಾ ಆಯ್ತು!?
Malenadu today news /ಶಿವಮೊಗ್ಗ/ದಾವಣಗೆರೆ, ಜುಲೈ 11: ಸಾಲದ ಕಂತು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ, ಪತಿಯೊಬ್ಬ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ್ದಾನೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. (ವೈಯಕ್ತಿಕ ವಿಚಾರಗಳು ಗೌಪ್ಯ) ಜುಲೈ 8 ರ ಮಧ್ಯಾಹ್ನ ನಡೆದ ಈ ಘಟನೆ ಇದೀಗ ಪೊಲೀಸ್ ದೂರು ಎಫ್ಐಆರ್ನೊಂದಿಗೆ ಬೆಳಕಿಗೆ ಬಂದಿದೆ.
ನಡೆದಿದ್ದು!?
ಇಲ್ಲಿನ ದಂಪತಿಯ ನಡುವೆ ಸಾಲದ ಕಂತು ಪಾವತಿಸುವ ಬಗ್ಗೆ ಜಗಳ ಆರಂಭವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿದಾಗ, ಪತಿರಾಯ ಹೆಂಡತಿಗೆ ಹೊಡೆದು, ಆಕೆಯ ಮೂಗನ್ನ ಕಚ್ಚಿ ತುಂಡು ಮಾಡಿದ್ದಾನೆ. ಈ ವಿಚಾರ ತಿಳಿಯುತ್ತಲೇ ಆಕೆಯನ್ನು ನೆರೆಹೊರೆಯವರು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಸ್ತುತ ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂತಸ್ತೆಗೆ ಚಿಕಿತ್ಸೆ ಮುಂದುವರಿದಿದೆ.

ಇನ್ನೂ ಘಟನೆ ಸಂಬಂಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಮೆಡಿಕಲ್ ಲೀಗಲ್ ಕೇಸ್ (MLC) ನಮೂದು ಮಾಡಲಾಗಿದೆ. ಪ್ರಕರಣವನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

Shocking Husband Bites Wifes Nose Over Debt Dispute in Davangere
A shocking incident in Channagiri, Davangere a husband allegedly bit off his wife’s nose during a heated argument over debt payments.
Domestic violence, nose bitten, debt dispute, Davangere, Channagiri, Mantarghatta, husband attacks wife, assault case, medical legal case, FIR, Karnataka crime, Hashtags (Comma-separated): #DomesticViolence #CrimeNews #Davangere #KarnatakaCrime #Assault #WifeAbuse #DebtDispute #PoliceInvestigation