Lokayukta raid Shivamogga 24 / ಶಿವಮೊಗ್ಗ, ಶಿಕಾರಿಪುರ, ಹೊಸನಗರ ಲೋಕಾಯುಕ್ತ ರೇಡ್! ಏನಿದು ವಿಚಾರ?

ಲೋಕಾಯುಕ್ತ ಅಧಿಕಾರಿಗಳಿಂದ ಬೆಳ್ಳಂಬೆಳಿಗ್ಗೆ ದಾಳಿ, ಸಾವಯವ ಕೃಷಿ ವಿಭಾಗದ ನಿರ್ದೇಶಕರ ಮನೆ ಮೇಲೆ ದಾಳಿ. Lokayukta officials raid Shivamogga, Shikaripura, and Hosnagar in the early hours of the morning

Lokayukta raid Shivamogga

ಶಿವಮೊಗ್ಗ:  ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಶಿವಮೊಗ್ಗ, ಶಿಕಾರಿಪುರ ಹಾಗೂ ಹೊಸನಗರದಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

ಕೃಷಿ ಹಾಗೂ ತೋಟಗಾರಿಕೆ ವಿವಿಯ  ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಪ್ರದೀಪ್ ಅವರ ಮನೆ ಮೇಲೆ ಲೋಕಾಯುಕ್ತರ ತಂಡ ದಾಳಿ ನಡೆಸಿದೆ. ಪ್ರಿಯಾಂಕ ಲೇಔಟ್‌ನಲ್ಲಿರುವ ಡಾ. ಪ್ರದೀಪ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು,  ಶಿಕಾರಿಪುರ ತಾಲೂಕಿನ ಭದ್ರಾಪುರದಲ್ಲಿರುವ ಡಾ. ಪ್ರದೀಪ್ ಅವರ ಫಾರ್ಮ್ ಹೌಸ್  ಸೇರಿದಂತೆ ಹೊಸನಗರದಲ್ಲೂ ದಾಳಿ ನಡೆಸಲಾಗಿದೆ.  

SIMS Medical Collegesuddi today
suddi today

ಲೋಕಾಯುಕ್ತ ಎಸ್ಪಿ ಎಂ.ಹೆಚ್. ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮೂರು ಕಡೆಗಳಲ್ಲಿ ಅಧಿಕಾರಿಗಳು, ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Lokayukta raid Shivamogga,

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು