diesel theft in mescom lorry  : ಮೆಸ್ಕಾಂ ಕಚೇರಿ ಲಾರಿಯಿಂದ 135 ಲೀಟರ್ ಡೀಸೆಲ್ ಕಳ್ಳತನ

prathapa thirthahalli
Prathapa thirthahalli - content producer

diesel theft in mescom lorry  : ಮೆಸ್ಕಾಂ ಕಚೇರಿ ಲಾರಿಯಿಂದ 135 ಲೀಟರ್ ಡೀಸೆಲ್ ಕಳ್ಳತನ

ಹೊಸನಗರ: ಇಲ್ಲಿನ ಮೆಸ್ಕಾಂ ಉಪವಿಭಾಗ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಬರೋಬ್ಬರಿ 135 ಲೀಟರ್ ಡೀಸೆಲ್ ಕಳ್ಳತನವಾಗಿರುವ ಘಟನೆ ನಡೆದಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂನ್ 20ರಂದು ಕಚೇರಿ ಮುಂಭಾಗ ನಿಲ್ಲಿಸಿದ್ದ ಲಾರಿಯನ್ನು  ಚಾಲನೆ ಚಾಲನೆ ಮಾಡಲು ಮುಂದಾದಾಗ ಲಾರಿ ಸ್ಟಾರ್ಟ್ ಆಗಿಲ್ಲ. ಇದರಿಂದ ಅನುಮಾನಗೊಂಡ ಚಾಲಕ ಡೀಸೆಲ್ ಟ್ಯಾಂಕ್ ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಹೊಸನಗರ ಮೆಸ್ಕಾಂ ಸಹಾಯಕ ಇಂಜಿನಿಯರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

- Advertisement -
Share This Article