SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 27, 2025
ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಉತ್ತಮ ಗಿಡಗಳನ್ನು ಹಾಕಿ ಬೆಳೆಸಬೇಕು. ಹಾಗೂ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನವನಗಳನ್ನು ಸಂರಕ್ಷಿಸಿಕೊಂಡು ಹೋಗಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಗುರುವಾರ ಕುವೆಂಪುನಗರದ ಎನ್‌ಇಎಸ್ ಬಡಾವಣೆಯ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಎನ್‌ಇಎಸ್ ಬಡಾವಣೆಯ ಉದ್ಯಾನವನಕ್ಕೆ ಯಾವೆಲ್ಲ ರೀತಿಯ ಗಿಡ ಮರಗಳನ್ನು ಹಾಕಬೇಕು, ಎಲ್ಲಿ ಜಿಮ್ ಅಳವಡಿಸಬೇಕು, ಮಕ್ಕಳ ಆಟಿಕೆಗಳ ಅಳವಡಿಕೆ ಹೀಗೆ ಉದ್ಯಾನವನದ ಕುರಿತು ಸಮರ್ಪಕವಾದ ಯೋಜನೆ ತಯಾರಿಸಿ, ವ್ಯವಸ್ಥಿತವಾಗಿ ಉದ್ಯಾನವನ ನಿರ್ಮಿಸಿಕೊಳ್ಳಬೇಕೆಂದರು. ಹಾಗೆಯೇ ಕಿವಿಮಾತು ಹೇಳಿದ ಅವರು ಉದ್ಯಾನವನಗಳನ್ನು ಉಳಿಸಿಕೊಂಡು ಹೋಗುವಲ್ಲಿ ನಿವಾಸಿಗಳ ಸಹಕಾರ ಅತ್ಯಗತ್ಯವಾಗಿದೆ ಎಲ್ಲ ನಿವಾಸಿಗಳು ಗಿಡ ಮರಗಳನ್ನು ನೆಡಬೇಕು ಹಾಗೂ ಉದ್ಯಾನವನದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ನಂತರ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿ, ನಗರವನ್ನು ಹಸಿರೀಕರಣ ಮಾಡಲು ಸೂಡಾ ವತಿಯಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 05 ಕೆರೆಗಳನ್ನು ಅಭಿವೃದ್ದಿ ಪಡಿಸಲು ಸಹ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಪ್ರಸ್ತುತ ಕುವೆಂಪು ನಗರದ ಹತ್ತಿರದ ಎನ್‌ಇಎಸ್ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ದಿ ಕಾಮಗಾರಿಯನ್ನು ರೂ.25 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಫೆನ್ಸಿಂಗ್, ಹೊರಾಂಗಣ ವ್ಯಾಮಾಯ ಸಾಮಗ್ರಿ, ಪಾಥ್‌ವೇ ನಿರ್ಮಾಣ, ಕಲ್ಲಿನ ಬೆಂಚುಗಳನ್ನು ಅಳವಡಿಸಲಾಗುವುದು. ಉತ್ತಮ ಮರಗಳಾಗುವಂತಹ ಗಿಡಗಳನ್ನು ನೆಡಲಾಗುವುದು ಎಂದ ಅವರು ಬಡಾವಣೆಗಳಲ್ಲಿನ ಎಲ್ಲ ನಿವಾಸಿಗಳು ತಮ್ಮ ಮನೆ ಮುಂದೆ ಗಿಡಗಳನ್ನು ಹಾಕಿ ಬೆಳೆಸಬೇಕು ಎಂದರು.
SUMMARY | Residents should plant good plants around their house and grow them. And the parks built in the localities should be preserved
KEYWORDS | plant, parks, sn channabasappa, suda,