ಶಿವಮೊಗ್ಗದಲ್ಲಿ ಮಲಗಿದ್ದವನ ಮೇಲೆ ಕುಸಿದು ಬಿದ್ದ ಗೋಡೆ | ಆಗಿದ್ದೇನು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 27, 2025

ಶಿವಮೊಗ್ಗ | ಪಾಳು ಬಿದ್ದ ಮನೆಯೊಂದರಲ್ಲಿ ಮಲಗಿದ್ದವನ ಮೇಲೆ ಗೋಡೆ ಕುಸಿದು ಬಿದ್ದಿದ್ದು, ಇದರ ಪರಿಣಾಮ ವ್ಯಕ್ತಿಗೆ ಗಂಭೀರ ಗಾಯಗಳಾಗಿರುವ ಘಟನೆ  ಭದ್ರಾವತಿಯಲ್ಲಿ ನಡೆದಿದೆ. 

ಭದ್ರಾವತಿ ನಗರದ 7 ನೇ ತಿರುವಿನಲ್ಲಿ 38 ವರ್ಷದ ಆನಂದ ಸ್ವಾಮಿ ಎನ್ನುವವರು ಮನೆಯಲ್ಲಿ ಮಲಗಿದ್ದರು.  ಮನೆ ಪಾಳು ಬಿದ್ದಿದ್ದರಿಂದ  ಮನೆಯ ಗೋಡೆ ಅವರ ಮೇಲೆ  ಕುಸಿದು ಬಿದ್ದಿದೆ.  ಆ ಕೂಡಲೆ ಅಗ್ನಿಶಾಮಕ ಸ್ಥಳದವರು ಸ್ಥಳಕ್ಕೆ ದಾವಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿದರು.  ವ್ಯಕ್ತಿಗೆ ಗಂಭಿರ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಗೆ ಆಸ್ಪತ್ರೆಗೆ ರವಾನಿಸಲಾಗಿದೆ.

SUMMARY | A man was seriously injured when a wall collapsed on him while he was sleeping in an abandoned house in Bhadravathi.

KEYWORDS | Bhadravathi, abandoned house, wall collapsed ,

Share This Article