SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 17, 2024
ಶಿವಮೊಗ್ಗ | ಮುಖಂಡ ಅನ್ವರ್ ಮಾಣಿಪ್ಪಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಮಾಡಿದ್ದಾರೆ ಎನ್ನಲಾದ 150 ಕೋಟಿ ಆಮೀಷದ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಮಾತನಾಡಿದ್ದಾರೆ. ಈ ಆರೋಪ ನಿಜವಾಗಿದ್ದರೆ ರಾಜ್ಯ ಸರ್ಕಾರ ಆ ಕೇಸ್‌ನ್ನು ಸಿಬಿಐಗೆ ವಹಿಸಲಿ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ನಡೆಯುತ್ತಿರುವ ವಕ್ಫ್ ವಿಚಾರದಲ್ಲಿ ಪ್ರಮುಖವಾಗಿ ಮೂರು ಅಂಶವಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರರವರು ಅನ್ವರ್ ಮಾಣಿಪ್ಪಾಡಿ ಹತ್ತಿರ ಹೋಗಿ 150 ಕೋಟಿ ನೀಡುವ ಆಮೀಷ ಒಡ್ಡಿದ್ದರು ಎಂಬಂತಹ ಆರೋಪದ ಸುದ್ದಿಗಳು ಹರಿದಾಡುತ್ತಿವೆ. ಅಷ್ಟೇಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರ ಸಿಬಿಐ ತನಿಖೆ ಆಗಬೇಕು ಎಂದು ಹೇಳ್ತಾರೆ.ಅಸಲಿಗೆ ಯಾವುದೇ ಕೇಸ್‌ನ್ನು ಸಿಬಿಐಗೆ ಕೊಡೋದು ರಾಜ್ಯ ಸರ್ಕಾರದ ನಿರ್ಣಯದಿಂದಲೇ ಸಾಧ್ಯವಾಗುವುದು. ಆದ್ರೆ ಮುಖ್ಯಮಂತ್ರಿಗಳು ಯಾವಾಗಲೂ ನನಗೂ ಸಿಬಿಐಗೂ ಸಂಬಂಧ ಇಲ್ಲ ಎನ್ನುವ ರೀತಿ ವರ್ತಿಸುತ್ತಾರೆ.
ಇನ್ನೂ ಈ ವಿಚಾರದ ಬಗ್ಗೆ ಅನ್ವರ್ ಮಾಣಿಪ್ಪಾಡಿ ಪ್ರತಿ ಬಾರಿ ಒಂದೊಂದು ಹೇಳಿಕೆಯನ್ನು ಕೊಡುತ್ತಿದ್ದಾರೆ. ಕೆಲವೊಮ್ಮೆ ಬಿ.ವೈ ವಿಜಯೇಂದ್ರ ನನಗೆ 150 ಕೋಟಿ ಆಫರ್ ಮಾಡಿಲ್ಲ ಎಂದು ಕೆಲವೊಮ್ಮೆ ಹೇಳುತ್ತಾರೆ, ಹಾಗೆ ಕೆಲವೊಮ್ಮೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಇದು ಬಹಳ ಸೀರಿಯಸ್ ಆದ ವಿಚಾರ ಈ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಈ ಕೇಸನ್ನ ಸಿಬಿಐಗೆ ವಹಿಸಲಿ ಎಂದು ಹೇಳಿದರು.
ರಾಜ್ಯದ ಮಠ ಮಂದಿರಗಳ ಆಸ್ತಿಯ ಪಹಣಿಯಲ್ಲಿ ಈಗ ವಕ್ಫ್ ಹೆಸರನ್ನು ಸೇರಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಮಠ ಮಂದಿರಗಳ ಆಸ್ತಿಗಳು ವಕ್ಫ್ ಆಸ್ತಿಗೆ ಸೇರಿರಲು ಸಾಧ್ಯವಿಲ್ಲ. ಹಾಗಾಗಿ ಅದರಲ್ಲಿರುವ ವಕ್ಫ್ ಎಂಬ ಹೆಸರನ್ನು ಕಿತ್ತು ಎಸೆಯಬೇಕು. ಮೇಲಾಗಿ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಇದುವರಗೂ ಸದನದಲ್ಲಿ ಚರ್ಚೆನಡೆಸಿಲ್ಲ ವಕ್ಫ್ ಭೂಮಿಯಲ್ಲಿ ಅನೇಕ ಹಗರಣಗಳು ನಡೆದಿದೆ ಎಂಬ ಮಾತು ಕೇಳಿ ಬರುತ್ತಿವೆ. ಹಾಗಾಗಿ ಅದನ್ನು ಸದನದಲ್ಲಿ ಮುಖ್ಯವಾಗಿ ಚರ್ಚೆ ಮಾಡಬೇಕು ಹಾಗೆಯೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
SUMMARY | Bjp state president B Y Vijayendra Anwar allegedly went to Manippady and offered him Rs 150 crore on the Waqf issue. If that is true, then the state government should hand over the case to the CBI,” eshwarappa said.
KEYWORDS | B Y Vijayendra, Anwar Manippady, Waqf issue, state govt,