SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 27, 2025
ತುರ್ತು ಕಾಮಗಾರಿ ಮತ್ತು ವಾಹಕ ಬದಲಾವಣೆ ಹಿನ್ನಲೆಯಲ್ಲಿ ಮಾರ್ಚ್ 28 ರಂದು ಶಿವಮೊಗ್ಗದ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಆಲ್ಕೋಳ. ವಿ.ವಿ.ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 28 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಎಪಿಎಂಸಿ ಮಾರುಕಟ್ಟೆ, ಆರ್.ಎಂ.ಸಿ. ಸಾಗರ ರಸ್ತೆ, ಶುಭಮಂಗಳ ಕಲ್ಯಾಣ ಮಂದಿರ, ವಿನೋಬನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹಾಗೆಯೇ ಮಾಚೇನಹಳ್ಳಿ 110/11 ಕೆವಿ ವಿ.ವಿ.ಕೇಂದ್ರದ ಎಂಸಿ.ಎಫ್-18 ಮಾರ್ಗದಲ್ಲಿ ವಾಹಕ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 28 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹೊನ್ನವಿಲೆ, ನವುಲೆಬಸವಾಪುರ, ಅಮರಾವತಿ ಕ್ಯಾಂಪ್, ಹಳೆಶೆಟ್ಟಿಹಳ್ಳಿ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಮತ್ತಿಘಟ್ಟ, ಪದ್ಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
SUMMARY | Mescom said in a statement that there will be a power outage in parts of Shivamogga on March 28 due to emergency work and change of carrier.
KEYWORDS | Mescom, power outage, Shivamogga, emergency work,