ಮಯನ್ಮಾರ್‌ ಹಾಗೂ ಥೈಲ್ಯಾಂಡ್‌ನಲ್ಲಿ ಭೂಕಂಪ 25 ಕ್ಕೂ ಹೆಚ್ಚು ಜನ ಸಾವು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 28, 2025

ಮಯನ್ಮಾರ್‌ ಹಾಗೂ ಥೈಲ್ಯಾಂಡ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಬೃಹದಾಕಾರದ ಕಟ್ಟಡಗಳು ಕುಸಿದು ಬಿದ್ದಿವೆ, ಇದರ ಪರಿಣಾಮ 25 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬ್ಯಾಂಕಾಕ್‌ನಲ್ಲೂ ಸಹ  ಭೂಕಂಪ ಸಂಭವಿಸಿದ್ದು, ನಿರ್ಮಾಣ ಹಂತದಲ್ಲಿರುವ ಗಗನಚುಂಬಿ ಕಟ್ಟಡ ಕುಸಿದು ಬಿದ್ದಿದೆ.  ಅದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 43 ಕಾರ್ಮಿಕರು ಕಟ್ಟಡದ ಮದ್ಯೆ  ಸಿಲುಕಿಕೊಂಡಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೃಹದಾಕಾರದ ಕಟ್ಟಡಗಳು ನೋಡ ನೋಡುತ್ತಿದ್ದಂತೆಯೇ  ಧರಗುರುಳಿದ್ದು, ರಸ್ತೆಗಳು  ಕಂಪಿಸಿವೆ. ಈ ಭೂಕಂಪದಿಂದ ಕೆಲವರು ಭಯಬೀತರಾಗಿ ರಸ್ತೆಗೆ ಓಡಿಬರುತ್ತಿದದ್ದರೆ, ಇನ್ನು ಕೆಲವರು ಕಟ್ಟಡದ ಮಧ್ಯೆ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ.  ಈ  ಭೂಕಂಪದ ಹಿನ್ನಲೆ ಮಯನ್ಮಾರ್‌ ಸರ್ಕಾರ ಸುತ್ತ ಮುತ್ತಲಿನ ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಭೂಕಂಪನದ ಭೀಕರತೆಯ ದೃಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.



ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು

ಇದಕ್ಕೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಭೂಕಂಪಕ್ಕೆ ಒಳಗಾದ ದೇಶಗಳಿಗೆ ಸಹಾಯ ಹಸ್ತ ನೀಡುವ ಭರವಸೆಯನ್ನು ನೀಡಿದ್ದಾರೆ. ಈ ಕುರಿತು ಟ್ವೀಟರ್‌ನಲ್ಲಿ ಪೋಸ್ಟರ್‌ ಒಂದನ್ನು ಶೇರ್‌ ಮಾಡಿದ್ದಾರೆ.

ಪೋಸ್ಟ್‌ನಲ್ಲಿರುವಂತೆ  ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಭಾರತ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ಸಚಿವಾಲಯವನ್ನು ಕೇಳಿಕೊಂಡಿದ್ದೇವೆ ಎಂದು ಬರೆದುಕೊಂದಿದ್ದಾರೆ.



SUMMARY | A 7.7 magnitude earthquake struck Myanmar and Thailand.

KEYWORDS |  earthquake, Myanmar, Thailand,

Share This Article