SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 27, 2025
ದಯವಿಟ್ಟು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಸರ್ಕಾರ ನಿರಂತರ ಜಾಹೀರಾತು ನೀಡುತ್ತಲೇ ಬಂದಿದೆ. ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಆದರೆ ಇಂದಿನ ಯುವಜನತೆ ಹೆಲ್ಮೆಟ್ ಧರಿಸಿದರೆ ಧರಿದ್ರ ವಕ್ಕರಿಸಿದಂತೆ ಭಾವಿಯುತ್ತಾರೆ. ವಾಹನದಲ್ಲಿ ಹೆಲ್ಮೆಟ್ ಇದ್ದರೂ ಧರಿಸುವುದಿಲ್ಲ. ಹಾಗೆಯೇ ಸ್ಪೀಡಾಗಿ ವಾಹನ ಚಲಾಯಿಸಿ ಸಾವಿನ ಮನೆ ಕದ ತಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಈ ರೀತಿಯ ಸಾವಿನ ದುರಂತಗಳು ಹಲವು ನಡೆದಿದೆ. ಅದರ ಸಾಲಿಗೆ ನೆನ್ನೆ ಶರಾವತಿ ನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಮೂರನೇ ವರ್ಷದ ಡಿಪ್ಲಮೋ ಓದುತ್ತಿದ್ದ ಉಲ್ಲಾಸ್ (20) ತನ್ನ ಸಹಪಾಠಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ. ಆಗ ಶರಾವತಿ ನಗರದ ನಾಗಪ್ಪನ ದೇವಸ್ಥಾನದ ಬಳಿ ಕಾರು ಎದುರಾಗಿದೆ. ಉಲ್ಲಾಸ್ ತನ್ನ ಬಲಗೈಲಿ ಹೆಲ್ಮೆಟ್ ಹೊಂದಿದ್ದರೂ, ಟ್ರಾಫಿಕ್ ಇಲ್ಲದ ಕಾರಣ ಹಾಗೆಯೇ ಬೈಕ್ ಓಡಿಸಿಕೊಂಡು ಬಂದಿದ್ದಾರೆ. ಈ ದೃಷ್ಯವನ್ನು ಸ್ಥಳೀಯರು ನೋಡಿದ್ದಾರೆ. ಆಗ ದಿಢೀರ್ ಎದುರಾದ ಕಾರು ಬೈಕ್‌ಗೆ ಅಪ್ಪಳಿಸಿದೆ. ಉಲ್ಲಾಸ್ ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಹಿಂಬದಿಯಿದ್ದ ಸಹಪಾಠಿ ಮೇಲೆ ಐದು ಅಡಿ ಎಗರಿ ನೆಲಕ್ಕೆ ಬಿದ್ದಿದ್ದಾರೆ. ಉಲ್ಲಾಸ್‌ನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಹಪಾಠಿಯನ್ನು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಲ್ಲಾಸ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಆತನ ಸಾವಿಗೆ ಸ್ನೇಹಿತರು ಬಂಧುಗಳು ಕಂಬನಿ ಮಿಡಿದಿದ್ದಾರೆ. ಉಲ್ಲಾಸ್ ಸೀಗೆಹಟ್ಟಿ ಅಡುಗೆ ಕಂಟ್ರಾಕ್ಟರ್ ಕಾಂತರಾಜುರವರ ಪುತ್ರನಾಗಿದ್ದಾನೆ.
SUMMARY | There have been many such incidents of death in Shivamogga. The incident that took place in Sharavathi Nagar yesterday is a testimony to that.
KEYWORDS | Sharavathi Nagar, accident, shivamogga,