SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 16, 2024
ಹೊಸನಗರ | ವ್ಯಕ್ತಿಯೋರ್ವ ಗ್ರಾಮಪಂಚಾಯಿತಿ ಸದಸ್ಯನ ಬೈಕ್ ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಹೊಸನಗರ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಭಾನುವಾರ ನಡೆದಿದೆ. ಈ ಘಟನೆಯ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಯ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಏನಿದು ಘಟನೆ
ದೇವರಾಜ್ ಎಂಬುವವರು ನಿಟ್ಟೂರು ಗ್ರಾಮ ಪಂಚಾಯಿತಿಯ ನಾಗೋಡಿ ವಿಶ್ವನಾಥ್ ಎಂಬುವವರ ಬೈಕ್‌ನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ್‌ರವರ ವಿರುದ್ಧದ ಹಳೇ ದ್ವೇಷವೇ ಈ ಹಲ್ಲೆಗೆ ಕಾರಣ ಎಂದು ದೂರಲಾಗಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಈ ಸಂಬಂಧ ನಾಗೋಡಿ ವಿಶ್ವನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ.
SUMMARY | A man intercepted the bike of a gram panchayat member and attacked him at Nittur village in Hosanagara taluk on Sunday.
KEYWORDS | gram panchayat member, attacked, Hosanagara, crime, news,