ಕಬ್ಬಿನ ಯಂತ್ರಕ್ಕೆ ಸಿಲುಕಿದ ಮಹಿಳೆಯ ಜಡೆ | ನಂತರ ಆಗಿದ್ದೇನು, ವಿಡಿಯೋ ವೈರಲ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 27, 2025

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಆಘಾತಕಾರಿ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಅಂತಹ ಘಟನೆಗಳಲ್ಲಿ ಕೆಲವರು ಬದುಕುಳಿದರೆ ಇನ್ನು ಕೆಲವರು ಸಾವನ್ನಪ್ಪುತ್ತಾರೆ. ಇಲ್ಲಿಯೇ  ಸಹ ಅಂತಹುದ್ದೇ ಘಟನೆಯೊಂದು ನಡೆದಿದೆ ಅದೇನೆಂದರೆ ಮಹಬೂಬಾಬಾದ್‌ ನಗರದಲ್ಲಿ ಕಬ್ಬಿನ ಯಂತ್ರದ ಚಕ್ರಕ್ಕೆ ಮಹಿಳೆಯ ಜಡೆ ಸಿಲುಕಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಡಿಯೋದಲ್ಲಿರುವಂತೆ ಮಹಿಳೆಯೊಬ್ಬರ ಜಡೆ ಆಕಸ್ಮಿಕವಾಗಿ ಕಬ್ಬಿನ ಯಂತ್ರದ ಚಕ್ರದ ಒಳಗೆ ಸಿಲುಕಿದೆ. ಆಗ ಸ್ಥಳಿಯರು ಕರೆಂಟ್‌ ಸ್ವೀಚ್‌ ಆಫ್‌ ಮಾಡುವ ಮೂಲಕ ಯಂತ್ರದ ಚಕ್ರವನ್ನು ಹಿಂದೆ ತಳ್ಳಿ ಮಹಿಳೆಯ ಕೂದಲನ್ನು ಹಿಂತೆಗೆದಿದ್ದಾರೆ. ಈ ಘಟನೆಯಿಂದ ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.



SUMMARY | A video of a woman’s braid getting stuck to the wheel of a sugarcane machine has gone viral on social media.

KEYWORDS | sugarcane machine, viral video,

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು