SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 16, 2024
ಶಿವಮೊಗ್ಗದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ವಿವಿಧ ಕಾರಣಕ್ಕೆ ಕಾಣೆಯಾದವರ ವ್ಯಕ್ತಿಯ ವಿವರಗಳನ್ನು ನೀಡಿರುವ ಪೊಲೀಸ್ ಇಲಾಖೆ ಅವರುಗಳು ಸುಳಿವು ಸಿಕ್ಕಲ್ಲಿ ತಮಗೆ ಮಾಹಿತಿ ನೀಡುವಂತೆ ಪ್ರಕಟಣೆಯನ್ನ ನೀಡಿದೆ. ಪೊಲೀಸ್ ಇಲಾಖೆಯ ಪ್ರಕಟಣೆಯ ವಿವರ ಹೀಗಿದೆ.
ಶಿವಮೊಗ್ಗದ 04 ನೇ ಕ್ರಾಸ್ ಹೊಸಮನೆ ವಾಸಿಯಾದ 65 ವಯಸ್ಸಿನ ಮುನಿಸ್ವಾಮಿ ಎಂಬುವವರು ಕಾಣೆಯಾಗಿದ್ದು, ಅವರು ಕಂಡಲ್ಲಿ ಮಾಹಿತಿ ತಿಳಿಸಿ ಎಂದು ದೊಡ್ಡಪೇಟೆ ಪೋಲಿಸ್‌ರು ಪ್ರಕಟಣೆ ಹೊರಡಿಸಿದ್ದಾರೆ.
ಮುನಿಯಪ್ಪ ಮಾನಸ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡು ವಾಪಸ್ ಊರಿಗೆ ಹೋಗುವಾಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಾರೆ ಸುಮಾರು 5.2ಅಡಿ ಎತ್ತರ,ವಿರುವ ಇವರು ಗೋಧಿ ಮೈ ಬಣ್ಣ, ಸಾದರಣ ಮೈಕಟ್ಟು, ಕಪ್ಪು ಬಿಳಿ ಕೂದಲು ಹೊಂದಿದ್ದಾರೆ, ಮೈಮೇಲೆ ಹಸಿರು ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಮತ್ತು ತೆಲುಗು ಬಾಷೆ ಮಾತನಾಡುತ್ತಾರೆ. ಇವರು ಸುತ್ತ ಮುತ್ತ ಎಲ್ಲಾದರು ಕಂಡರೆ ದೊಡ್ಡಪೇಟೆ ಪೋಲಿಸ್ ಠಾಣೆ ಸಂಖ್ಯೆ 08182-261414, 9916882544 ಗಳನ್ನು ಸಂಪರ್ಕಿಸಿ.
ಚನ್ನಗಿರಿ ತಾಲ್ಲೂಕು ತಾವರೆಕೆರೆ ವಾಸಿ 35 ವರ್ಷದ ದಿಲೀಪ್ ಬಿನ್ ಓಕಾಂರಪ್ಪ ಎಂಬುವವರು ನವಂಬರ್ 14 ರಂದು ಕಾಣೆಯಾಗಿದ್ದಾರೆ.
ದಿಲೀಪ್ ನವಂಬರ್ 14 ರಂದು ಚಿಕಿತ್ಸೆ ಪಡೆಯಲು ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ಆ ವೇಳೆ ತಂದೆ ಊಟಕ್ಕೆ ಹೋಗಿದ್ದಾರೆ. ಅವರು ವಾಪಸ್ ಬರುವ ಸಮಯದಲ್ಲಿ ದಿಲೀಪ್ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ವ್ಯಕ್ತಿ ಸುಮಾರು 5.7 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, ಸಾದರಣ ಮೈಕಟ್ಟು, ಕಪ್ಪು ಬಿಳಿ ಮಿಶ್ರಿತ ಕುರುಚಲು ಗಡ್ಡ ಬಿಟ್ಟಿದ್ದು, ನೀಲಿ ಬಣ್ಣದ ಶರ್ಟ್, ಹಸಿರು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಎಡಗಾಲಿನ ಹೆಬ್ಬೆಟ್ಟು ಅರ್ಧ ತುಂಡಾಗಿರುತ್ತದೆ. ಈ ವ್ಯಕಿ ಪತ್ತೆಯಾದರೆ ದೊಡ್ಡಪೇಟೆ ಪೋಲಿಸ್ ಠಾಣೆ ಸಂಖ್ಯೆ 08182-261414, 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆ ತಿಳಿಸಿದೆ.
43 ವರ್ಷದ ಹೀರಾಬಾಯಿ ಎಂಬ ಮಾನಸಿಕ ಅಸ್ವಸ್ಥೆ ಕಾಣೆಯಾಗಿದ್ದಾರೆ. ಇವರನ್ನು ರಾಜ್ಯ ಮಹಿಳಾ ನಿಲಯ, ಶಿವಮೊಗ್ಗ ಸಂಸ್ಥೆಗೆ ಹಾವೇರಿ ಜಿಲ್ಲೆ ಶಿಗ್ಗಾಂವ್‌ನ ಶ್ರೀ ಮೃತ್ಯುಂಜಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ದಾಖಲಿಸಿಕೊಂಡಿತ್ತು, ಇದೀಗ ಇವರು ಕಾಣೆಯಾಗಿದ್ದು, ಕಾಣೆಯಾದವರ ಪತ್ತೆಗೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
SUMMARY | 65-year-old Muniswamy, a resident of 04th Cross Hosamane in Shivamogga, is missing and if he is found, inform him, doddapet police said in a release.
KEYWORDS | missing,doddapet police. kannada news,