SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 23, 2024
ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್‌ಗಳನ್ನು ನೀಡುವ ಮೊಬೈಲ್‌ಗಳ ಕಂಪನಿಗಳಲ್ಲಿ ಪೋಕೋ ಕಂಪನಿ ಕೂಡ ಒಂದಾಗಿದ್ದು, ಇದೀಗ ಅತಿ ಕಡಿಮೆ ಬೆಲೆಯಲ್ಲಿ ಪೋಕೋ 2 ಎಂಬ ವಿನೂತನ 5 ಜಿ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದೆ.
ಪೋಕೊ ಎಮ್ ಪ್ರೊ 5ಜಿ ಮತ್ತು ಪೋಕೊಸಿ75 5ಜಿ ಎಂಬ ಹೆಸರಿನ ಎರಡು ಮೊಬೈಲ್‌ಗಳನ್ನು ಈಗ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಬಿಡುಗಡೆಗೊಳಿಸಿದೆ. ಈ ಕುರಿತು ಪೊಕೋ ಭಾರತದ ಮುಖ್ಯಸ್ಥ ಹಿಮಾಂಶು ಟಂಡನ್ ಮಾತನಾಡಿ ನಾವು ಸದಾ ಪ್ರತಿಯೊಬ್ಬರಿಗೂ ಬಲನೀಡುವಂತಹ ತಂತ್ರಜ್ಞಾನ ರೂಪಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ ಎಂದು ಹೇಳಿದ್ದಾರೆ. ಎಮ್ ಪ್ರೊ 5ಜಿ ಅಮೋಲ್ಡ್ ಡಿಸ್‌ಪ್ಲೇ, ಉತ್ತಮ ದರ್ಜೆಯ ಕ್ಯಾಮೆರಾ ಹೊಂದಿದೆ ಹಾಗೆಯೇ ಪೋಕೋ ಸಿ75 5ಜಿ ಎಕೈಕಸೋನಿ ಸೆನ್ಸಾರ್ ಇರುವ ಕೈಗೆಟುಕುವ 5ಜಿ ಸ್ಟಾರ್ಟ್ ಫೋನ್ ಆಗಿದೆ. ಈ ಫೀಚರ್ಸ್ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದರು.

ಮೊದಲನೆಯದಾಗಿ ಪೋಕೊ ಎಮ್ ಪ್ರೊ 5ಜಿ ಯಲ್ಲಿರುವ ವೈಶಿಷ್ಟ್ಯತೆಯನ್ನು ನೋಡುವುದಾದರೆ, ಈ ಮೊಬೈಲ್ ನಲ್ಲಿ ಗೊರಿಲ್ಲಾ ಡಿಸ್ಪ್ಲೈ ಅನ್ನು ನೀಡಲಾಗಿದ್ದು,6.67 ಗೊಲೆಡ್ ಎಫ್ ಎಚ್‌ಡಿ+ ಸ್ಟೀನ್ ಮತ್ತು ಅಮೋಲ್ಡ್ ಡಿಸ್‌ಪ್ಲೇ ನೀಡಲಾಗಿದೆ. ಹಾಗೆಯೇ 50ಎಂಪಿ ಕ್ಯಾಮರವನ್ನು ನೀಡಲಾಗಿದ್ದು, 6 ಜಿಬಿ RAM ಹಾಗೂ 128 gb ಸ್ಟೋರೆಜ್ ಅನ್ನು ಹೊಂದಿದೆ. 5 ಸಾವಿರ ಎಂ ಹೆಚ್ ಬ್ಯಾಟರಿ ಕ್ಯಾಪಾಸಿಟಿಯನ್ನುಈ ಮೊಬೈಲ್‌ಗೆ ನೀಡಲಾಗಿದೆ. ಈ ಮೊಬೈಲ್ ನ ಬೆಲೆ ₹13,999 ರೂ ಇದೆ.
ಪೋಕೊ ಎಮ್7 ಪ್ರೊ. 5ಜಿ ವಿಶೇಷತೆಯನ್ನು ನೋಡುವುದಾದರೆ : ಈ ಮೊಬೈಲ್ ನಲ್ಲಿ 6 ಜಿಬಿ ram ಹಾಗೂ 128 ಜಿಬಿ ಸ್ಟೋರೆಜ್ ಕ್ಯಪಾಸಿಟಿ ಹೊಂದಿದೆ. ಈ ಮೊಬೈಲ್ 5160 ಎಂಎಹೆಚ್ ಬ್ಯಾಟರಿ ಕ್ಯಾಪಾಸಿಟಿಯನ್ನ ಹೊಂದಿದ್ದು, 50 ಎಂಪಿ ಸೋನಿಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಈ ಮೊಬೈಲ್ನಲ್ಲಿ ಡುಯಲ್ ಸಿಮ್ ಅಳವಡಿಸುವ ಆಪ್ಷನ್ ಇದ್ದು ಎರಡು 5 ಜಿ ಸಿಮ್ ಗಳನ್ನು ಅಳವಡಿಸ ಬಹುದು,ಈ ಮೊಬೈಲ್ ಗೆ 14999 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ಎರಡು ಮೊಬೈಲ್ ಗಳು ಈಗ ಪ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ಅವುಗಳ ram ಹಾಗೂ ಸ್ಟೋರೇಜ್ ಗಳ ಮೇಲೆ ಬೆಲೆ ನಿಗದಿಯಾಗುತ್ತದೆ. ಹಾಗೆಯೇ ಈ ಮೊಬೈಲ್ ಹೆ 4ಜಿಬಿ ram ಹಾಗೂ 64 ಜಿಬಿ ಸ್ಟೋರೆಜ್ ಗೆ 7999 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
SUMMARY | Poco is one of the few mobile companies that offers the best features at the lowest price and has now launched a new 5G mobile called poco 2 at a very low price.
KEYWORDS | Poco, 5G mobile, low price,