ಶಿವಮೊಗ್ಗ ಜಿಲ್ಲೆಗೆ!? ಕಾಗೋಡು ತಿಮ್ಮಪ್ಪರ ಮಾತಂದರೆ ಮಾತು ಗುಡುಗು ಸಿಡಿಲು ಮಿಂಚು!
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರ ಮಾತುಗಳೆಂದರೆ ಗುಡುಗು ಸಿಡಿಲು ಇದ್ದಂತೆ ಅವರ ಅಭಿಮಾನಿಗಳೇ ಹೇಳುತ್ತಾರೆ. ಸರಾಗವಾಗಿ ಹಾಗೂ ಅಷ್ಟೆ ನಾಟಿತನದ ಭಾಷೆಯಲ್ಲಿ ಮಾತನಾಡುತ್ತಿದ್ದ ಅವರ ಭಾಷಣ ಕೆಳುವುದೇ ವಿಶೇಷವಾಗಿತ್ತು. ಮಲ್ನಾಡಿನ ಅಪ್ಪಟ ಹಳ್ಳಿತನದ ಸೊಗಡಿನ ಪದಗಳಲ್ಲಿ ವಾಗ್ದಾಳಿ ನಡೆಸಲು ನಿಂತರೇ ಎಂತವರೇ ಆದರೂ ಎದುರುವಾದಿಗಳು ಪ್ರತಿಕ್ರಿಯೆ ನೀಡುವುದು ಅನಿವಾರ್ಯವಾಗುತ್ತಿತ್ತು. ಅಷ್ಟರಮಟ್ಟಿಗೆ ಕಾಗೋಡು ತಿಮ್ಮಪ್ಪನವರ ಮಾತುಗಳು ಬಾಣದ ಮೊನೆಗಳಂತೆ ಎದೆಗೆ ಚುಚ್ಚುತ್ತಿದ್ದವು. ಅಂತಹ ಮಾತಿನ ಒಂದು ತುಣುಕನ್ನ ಮಲೆನಾಡು ಟುಡೆ ಆ ದಿನಗಳ ರೆಟ್ರೋ ಶೋನ ವಿಡಿಯೋದಲ್ಲಿ ನೀಡಿದೆ. ಓದುಗರು ಇದನ್ನ ಗಮನಿಸಬಹುದು. ಸನ್ನಿವೇಶ ಯಾವುದು ಎನ್ನುವುದನ್ನ ಕೆಣಕುವುದು ಬೇಡ, ಆದರೆ ಅಂದಿನ ಸನ್ನಿವೇಶವೊಂದರಲ್ಲಿ ಕಾಗೋಡು ತಿಮ್ಮಪ್ಪರವರು ಅಧಿಕಾರಿಗಳ ವಿರುದ್ಧ ವ್ಯವಸ್ಥೆಯಲ್ಲಾದ ಏರುಪೇರಿನ ವಿರುದ್ಧ ಮತ್ತು ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಮಾತುಗಳನ್ನ ಆಡಿದ್ದರು. ಅವರ ಈ ಮಾತುಗಳು ಎಷ್ಟು ನೇರವಾಗಿತ್ತು ಎಂಬುದು ಗಮನಿಸಿ.. ಇದೇ ರೀತಿಯ ಇನ್ನಷ್ಟು ವಿಡಿಯೋಗಳು ನಿಮಗೆ ತಲುಪಿಸುವ ಜವಾಬ್ದಾರಿ ನಮ್ಮದು.
ವಿಡಿಯೋದಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಕಾಗೋಡು ತಿಮ್ಮಪ್ಪನವರು ನಾವು ತಪ್ಪು ಮಾಡಿದ್ದರೆ ನಡು ದಾರಿಯಲ್ಲಿ ಯಾವುದೇ ಶಿಕ್ಷೆಗೆ ಗುರಿಯಾಗಲು ಸಿದ್ಧ, ಆದರೆ ಅಧಿಕಾರಿಗಳು ಎಸಗಿರುವ ತಪ್ಪುಗಳಿಗೆ ಅವರನ್ನು ಯಾವ ವೃತ್ತದಲ್ಲಿ ನೇತು ಹಾಕಬೇಕು ಎಂದು ಹೇಳಿ ಅಂಥಾ ಪ್ರಶ್ನಿಸುತ್ತಾರೆ. ಅಲ್ಲದೆ ಶಿವಮೊಗ್ಗ ಜಿಲ್ಲೆಯು ರಾಜಕೀಯವಾಗಿ ಸತ್ತವರಿಗೆ ಮರುಜೀವ ನೀಡಿದ ಜಿಲ್ಲೆಯಾಗಿದೆ ಎಂದು ಬಣ್ಣಿಸಿರುವ ಅವರು ಇದೊಂದು ಹೋರಾಟದ ನೆಲವಾಗಿದೆ ಎಂದು ನೆನಪಿಸಿದ್ದಾರೆ. ಈ ಹಿಂದೆ ಈ ಜಿಲ್ಲೆಯಲ್ಲಿ ಮರ್ಯಾದೆ ಮತ್ತು ಗೌರವದಿಂದ ಆಡಳಿತ ನಡೆಸಿದ ನಾಯಕರಿದ್ದಾರೆ ಹಾಗೂ ಮುಖ್ಯಮಂತ್ರಿಯಾದವರೂ ಇದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ.
ಜಿಲ್ಲೆಯ ಘನತೆ ಮತ್ತು ಹೋರಾಟದ ಹಿನ್ನೆಲೆಯನ್ನು ಮರೆತು ವರ್ತಿಸುವವರ ವಿರುದ್ಧ ಜಿಲ್ಲೆಗೆ ಕಾಲಿಟ್ಟು ನೋಡಿ ನಿಮ್ಮನ್ನು ಹೇಗೆ ಎದುರಿಸುತ್ತೇವೆ ಎಂಬುದನ್ನು ತೋರಿಸುತ್ತೇವೆ ಎಂದು ಅವರು ಸವಾಲು ಹಾಕುವ ಕಾಗೋಡು ತಿಮ್ಮಪ್ಪರ ಮಾತು ಅಂದರೆ ಮಾತು ಬಿಡಿ,, ಅದಕ್ಕೆ ಮರು ಹೋಲಿಕೆಯೇ ಇಲ್ಲ ಏನಂತಿರಿ
#KagoduThimmappa #Shivamogga #KarnatakaPolitics #MalenaduToday #KannadaNews #ShivamoggaNews #CongressLeader #KarnatakaNews
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
