THIRTHAHALLI

ತೀರ್ಥಹಳ್ಳಿ: ಪಂಚಾಯ್ತಿಯಲ್ಲಿ ಕುಡಿಯುವ ನೀರಿಗೆ ಅಳವಡಿಸಿದ್ದ ಮೋಟರ್​ನ್ನೇ ಕದ್ದ ಕಳ್ಳರು: ಪ್ರಕರಣ ದಾಖಲು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Thirthahalli ತೀರ್ಥಹಳ್ಳಿ: ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಅಳವಡಿಸಲಾಗಿದ್ದ ಎರಡು ಮೋಟಾರ್ ಪಂಪ್‌ಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗದಲ್ಲಿ ನಡೆದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು  

ಘಟನೆ ವಿವರ

ಘಟನೆ ವಿವರ ನೋಡುವುದಾದರೆ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗದ ತಿಮ್ಮಣ್ಣ ನಾಯ್ಕನ ಕೆರೆಯ ಬಳಿ ಇರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಸಾರ್ವಜನಿಕರ ಬಳಕೆಗಾಗಿ 7.5 ಹೆಚ್.ಪಿ ಮತ್ತು 5 ಹೆಚ್.ಪಿ ಸಾಮರ್ಥ್ಯದ ಎರಡು ಮೋಟಾರ್ ಪಂಪ್‌ಗಳನ್ನು ಅಳವಡಿಸಲಾಗಿತ್ತು.  ಮೇ 15 ರನ ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ಗ್ರಾಮ ಪಂಚಾಯಿತಿಯ ನೀರುಗಂಟೆ ಮೋಟಾರ್‌ಗಳ ಸ್ವಿಚ್ ಆಫ್ ಮಾಡಿದ್ದರು. ಆ ಸಮಯದಲ್ಲಿ ಮೋಟಾರ್ ಪಂಪ್‌ಗಳು ಬಾವಿಯಲ್ಲೇ  ಇದ್ದವು ಆದರೆ, ಮರುದಿನ ಮುಂಜಾನೆ 06-00 ಗಂಟೆಗೆ ನೀರುಗಂಟೆ ಮೋಟಾರ್‌ಗಳನ್ನು ಚಾಲೂ ಮಾಡಲು (ಸ್ವಿಚ್ ಆನ್) ಹೋದಾಗ, ಬಾವಿಗೆ ಅಳವಡಿಸಲಾಗಿದ್ದ ಆ ಎರಡೂ ಮೋಟಾರ್ ಪಂಪ್‌ಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. 

ಯಾರೋ ಅಪರಿಚಿತ ಕಳ್ಳರು ರಾತ್ರೋರಾತ್ರಿ ಬಾವಿಗೆ ಇಳಿದು ಮೋಟಾರ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಖಾತ್ರಿಯಾದ ತಕ್ಷಣ, ನೀರುಗಂಟೆಯು ಈ ವಿಷಯವನ್ನು ಪಿ,ಡಿ,ಒ ಅವರಿಗೆ ತಿಳಿಸಿದ್ದಾರೆ. ಕಳ್ಳತನವಾಗಿರುವ ಎರಡು ಮೋಟಾರ್‌ಗಳ ಒಟ್ಟು ಅಂದಾಜು ಮಾರುಕಟ್ಟೆ ಬೆಲೆ ಸುಮಾರು 70,000 ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ. ಮೋಟರ್​​ನ್ನು ಕಳ್ಳತನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕೆಂದು  pdo ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Thirthahalli Two Water Motors Stolen in Kavaledurga

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.