ಶಿವಮೊಗ್ಗ: 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು 

ಹಂಚಿಕೊಳ್ಳಿ
WhatsApp Facebook X Telegram
Hosanagara 60 Areca Nut Trees Destroyed
Hosanagara 60 Areca Nut Trees Destroyed

ಹೊಸನಗರ: ಜಿಲ್ಲೆಯ ಹೊಸನಗರ ತಾಲೂಕಿನ ಬ್ರಾಹ್ಮಣ ತರುವೆ ಗ್ರಾಮದ ಚಕ್ರೆ ಎಂಬಲ್ಲಿ ದುಷ್ಕರ್ಮಿಗಳು 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡೆದು ಹಾಕಿರುವ ಘಟನೆ ಸಂಭವಿಸಿದೆ.

ಮೇ 9 ಹಾಗೂ 10ರಂದು ನಗರದಲ್ಲಿ ಶಿವಮೊಗ್ಗ ಸಾಹಿತ್ಯ ಹಬ್ಬ, ಏನೆಲ್ಲಾ ಕಾರ್ಯಕ್ರಮ ಇರಲಿದೆ

ಘಟನೆ ವಿವರ: ಚಕ್ರೆಯ ನಾರಾಯಣ ಮೂರ್ತಿ ಎಂಬುವವರಿಗೆ ಸೇರಿದ ಅಡಿಕೆ ತೋಟಕ್ಕೆ ಮಧ್ಯರಾತ್ರಿ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕತ್ತರಿಸಿದ್ದಾರೆ. ಅಷ್ಟೇ ಅಲ್ಲದೆ, ತೋಟಕ್ಕೆ ಅಳವಡಿಸಲಾಗಿದ್ದ ಜೆಟ್ ಪೈಪ್ ಸೇರಿದಂತೆ ಇನ್ನಿತರ ವಸ್ತುಗಳನ್ನು ನಾಶಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ದುಷ್ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hosanagara 60 Areca Nut Trees Destroyed

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor