ಕೋಗೋಡು ಬಂಡೆ ಹತ್ತಿರ ಎಕ್ಕಾ ರಾಜಾ ರಾಣಿ! ಇಸ್ಪೀಟ್ ಎಲೆ ಜೊತೆ, ಮೂವರು ಅಂದರ್

ತೀರ್ಥಹಳ್ಳಿ / ತಾಲ್ಲೂಕಿನ ಯಡೇಹಳ್ಳಿ ಕೆರೆಯ ಕೊಗೋಡು ಬಂಡೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ ಈ ರೇಡ್​ನಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಕೋಗೋಡು ಬಂಡೆ ಹತ್ತಿರ ಎಕ್ಕಾ ರಾಜಾ ರಾಣಿ! ಇಸ್ಪೀಟ್ ಎಲೆ ಜೊತೆ, ಮೂವರು ಅಂದರ್
ಕೋಗೋಡು ಬಂಡೆ ಹತ್ತಿರ ಎಕ್ಕಾ ರಾಜಾ ರಾಣಿ! ಇಸ್ಪೀಟ್ ಎಲೆ ಜೊತೆ, ಮೂವರು ಅಂದರ್ಕೋಗೋಡು ಬಂಡೆ ಹತ್ತಿರ ಎಕ್ಕಾ ರಾಜಾ ರಾಣಿ! ಎಲೆ ಜೊತೆ, ಮೂವರು ಅಂದರ್

ತೀರ್ಥಹಳ್ಳಿಯ ಈ ಸುದ್ದಿಯನ್ನು ಸಹ ಓದಿ : ತೀರ್ಥಹಳ್ಳಿ : ಬೈಕ್​ ತಗೊಂಡೋರು, ಕ್ಲಿಯರೆನ್ಸ್ ಲೆಟರ್​ ಕೇಳಿದ್ದಕ್ಕೆ ಏನೆಲ್ಲಾ ಆಯ್ತು ಓದಿ

ಇಸ್ಪೀಟ್ ಆಟ / ಪೊಲೀಸ್ ಮಾಹಿತಿ ಮೇರೆಗೆ ರೇಡ್​

ನಾಲ್ಕೈದು ಜನರು ಗುಂಪು ಕಟ್ಟಿಕೊಂಡು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸ್ ಇನ್​ಫಾರ್ಮರ್​ ಪಕ್ಕಾ ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಚಂದ್ರಪ್ಪ ಆರ್ ಸಿಬ್ಬಂದಿ ವೀರೇಂದ್ರ, ದೀಪಕ್ ಮತ್ತು ಸುದರ್ಶನ ಅವರೊಂದಿಗೆ ಮಧ್ಯಾಹ್ನ 03:30 ಗಂಟೆಗೆ ರೇಡ್ ಮಾಡಿದ್ದಾರೆ. 

ರೇಡ್​ನಲ್ಲಿ ಕಾರ್ಡ್ಸ್​ ಆಡುತ್ತಿದ್ದ ಮೂವರು ಸಿಕ್ಕಿಬಿದ್ದಿದ್ದಾರೆ. ಮೂವರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ 2280 ರೂಪಾಯಿ ನಗದು, 52 ಕಾರ್ಡ್‌ ಹಾಗೂ ಪ್ಲಾಸ್ಟಿಕ್ ಚೀಲವನ್ನ  ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಕುರಿತು ನ್ಯಾಯಾಲಯದ ಅನುಮತಿ ಪಡೆದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಂಜ್ಞೆಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಕೋಗೋಡು ಬಂಡೆ ಹತ್ತಿರ ಎಕ್ಕಾ ರಾಜಾ ರಾಣಿ! ಇಸ್ಪೀಟ್ ಎಲೆ ಜೊತೆ, ಮೂವರು ಅಂದರ್
ಕೋಗೋಡು ಬಂಡೆ ಹತ್ತಿರ ಎಕ್ಕಾ ರಾಜಾ ರಾಣಿ! ಇಸ್ಪೀಟ್ ಎಲೆ ಜೊತೆ, ಮೂವರು ಅಂದರ್ಕೋಗೋಡು ಬಂಡೆ ಹತ್ತಿರ ಎಕ್ಕಾ ರಾಜಾ ರಾಣಿ! ಎಲೆ ಜೊತೆ, ಮೂವರು ಅಂದರ್

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw