ಶಿವಮೊಗ್ಗದಲ್ಲಿ ಮತ್ತೊಮ್ಮೆ ನಕಲಿ ಚಿನ್ನದ ಅಡಮಾನದ ಪ್ರಕರಣ! ತೀರ್ಥಹಳ್ಳಿಯ ಒಬ್ಬ ಅರೆಸ್ಟ್!

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗದಲ್ಲಿ ಮತ್ತೊಮ್ಮೆ ನಕಲಿ ಚಿನ್ನದ ಅಡಮಾನದ ಪ್ರಕರಣ! ತೀರ್ಥಹಳ್ಳಿಯ ಒಬ್ಬ ಅರೆಸ್ಟ್!

Fake Gold Loan Scam / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ಮತ್ತೊಮ್ಮೆ ನಕಲಿ ಚಿನ್ನದ ಅಡಮಾನದ ಪ್ರಕರಣವೊಂದು ಕೇಳಿಬಂದಿದ್ದು, ಈ ಸಂಬಂಧ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಸವಾರ್​ ಲೇನ್ ಶಾಖೆಯ ವ್ಯವಸ್ಥಾಪಕ ಕ್ರಾಂತಿಕುಮಾರ್ ಅವರ ದೂರಿನ ಅನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಪ್ರಕರಣದಲ್ಲಿ ಆರೋಪಿಗಳು ಸಹ ಅರೆಸ್ಟ್ ಆಗಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ದೊಡ್ಟಪೇಟೆ ಪೊಲೀಸರು ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಬಂಗಾರ ಲೇಪಿತ ನಕಲಿ ಆಭರಣಗಳನ್ನ ಗಿರವಿ ಇಟ್ಟು ಸಾಲ ಪಡೆದಿರುವ ದಿನಾಂಕ 03/07/2026 ರಂದು ಕಲಂ 61(1), 318(4) ಸಹಿತ 3(5) ಬಿಎನ್ಎಸ್ 2023 ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಬಿಳ್ಮನೆ ಅರೆಕಲ್ಲು ಗ್ರಾಮದ ನಿವಾಸಿ 39 ವರ್ಷದ ಲೋಕೇಶ ಬಿ.ಜೆ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಇನ್ನೂ ಪ್ರಕಟಣೆಯಲ್ಲಿ ವಿವರಿಸಿರುವ ಹಾಗೆ, ಬಂಧಿತ ಆರೋಪಿ ಸ್ವ ಇಚ್ಛಾ ಹೇಳಿಕೆ ನೀಡಿದ್ದಾನೆ. ಆ ಹೇಳಿಕೆಯಲ್ಲಿ ಆತ ವಿವಿಧ ಬ್ಯಾಂಕುಗಳಲ್ಲಿ ಹಾಗೂ ಜ್ಯುವೆಲ್ಲರಿ ಶಾಪ್‌ಗಳಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಎಲ್ಲೆಲ್ಲಿ ನಕಲಿ ಚಿನ್ನದ ಅಡಮಾನ

  • ಶಿವಮೊಗ್ಗದ ಸವಾರ್​ ಲೈನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 163.300 ಗ್ರಾಂ ಅಡವಿಟ್ಟು 7,62,557 ರೂಪಾಯಿ ಸಾಲ
  • ತೀರ್ಥಹಳ್ಳಿಯ ವರ್ತಕರ ಸೌಹಾರ್ದ ಸಂಘ ನಿಯಮಿತದಲ್ಲಿ 75.844 ಗ್ರಾಂ ಅಡವಿಟ್ಟು 9,33,000 ರೂಪಾಯಿ ಸಾಲ
  • ಆಲ್ಕೊಳದ ಸಿರಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಘದಲ್ಲಿ 75.01 ಗ್ರಾಂ ಅಡವಿಟ್ಟು 7,43,000 ರೂಪಾಯಿ ಸಾಲ
  • ಇದೇ ರೀತಿ ಗೋಪಾಳದ ಡಿ.ಸಿ.ಸಿ ಬ್ಯಾಂಕ್‌ನಲ್ಲಿ 48.28 ಗ್ರಾಂ ಇಟ್ಟು 1,79,000 ರೂಪಾಯಿ ಸಾಲ
  • ಸವಾರ್​ ಲೈನ್ ರಸ್ತೆಯ ಇಂಡಿಯನ್ ಓವರ್ಸಿಸ್ ಬ್ಯಾಂಕ್‌ನಲ್ಲಿ 26.490 ಗ್ರಾಂ ಇಟ್ಟು 1,10,000 ರೂಪಾಯಿ ಸಾಲ
  • ನೇತಾಜಿ ಸರ್ಕಲ್‌ನ ಗುಲಾಬಿ ಜ್ಯುವೆಲ್ಲರಿ ವರ್ಕ್ಸ್‌ನಲ್ಲಿ 30.90 ಗ್ರಾಂ ಇಟ್ಟು 1,90,000 ರೂಪಾಯಿ ಸಾಲ
  • ಒಟ್ಟಾರೆಯಾಗಿ 419.824 ಗ್ರಾಂ ನಕಲಿ ಆಭರಣಗಳನ್ನು ಅಡವಿಟ್ಟು ಒಟ್ಟು 28,87,237 ರೂಪಾಯಿ ಸಾಲ

ಸದ್ಯ ಪಂಜಾಬ್ ನ್ಯಾಷನಲ್​ ಕೇಸ್​ನಲ್ಲಿ ತೀರ್ಥಹಳ್ಳಿ ತಾಲೂಕಿನ ಲೋಕೇಶ ಬಿ.ಜೆ, ಶಿವಮೊಗ್ಗ ಮಲವಗೊಪ್ಪದ ಸುಧಾ ಪ್ರತಾಪ ನಾಯಕ್, ಶಿವಮೊಗ್ಗ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಚಿನ್ನದ ಮೌಲ್ಯಮಾಪಕ ಎಸ್.ವೈ ರವಿಶಂಕರ್, ತೀರ್ಥಹಳ್ಳಿ ತಾಲೂಕಿನ ರಾಹುಲ್ ಭಾಸ್ಕರ್ ಹಾಗೂ ತೀರ್ಥಹಳ್ಳಿ ತಾಲೂಕಿನ ಶರತ್ ನಾಗರಾಜ್ ಪ್ರಕರಣದ ಆರೋಪಿಗಳು ಎಂದು ಪೊಲೀಶಸರು ತಿಳಿಸಿದ್ದಾರೆ. ಅಲ್ಲದೆ ಗಿರವಿ ಇಟ್ಟಿದ್ದ 28,87,237 ರೂಪಾಯಿ ಮೌಲ್ಯದ 419.824 ಗ್ರಾಂ ನಕಲಿ ಬಂಗಾರವನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಳ್ಳಲಾಗಿದೆ ಎಂದು ಪ್ರೆಸ್​ ರಿಲೀಸ್​ನಲ್ಲಿ ವಿವರಿಸಿದ್ದಾರೆ.

ಇನ್ನೂ ಲೋಕೇಶ್ ಮಾತ್ರ ಅರೆಸ್ಟ್ ಆಗಿದ್ದು ಉಳಿದ ಸುಧಾ, ರಾಹುಲ್ ಮತ್ತು ಶರತ್ ಅವರುಗಳು ಸಹ ಇದೇ ರೀತಿಯಲ್ಲಿ ನಕಲಿ ಬಂಗಾರವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಗಿರವಿ ಇಟ್ಟು ಸಾಲ ಪಡೆದಿರುವ ಬಗ್ಗೆ ಪೊಲೀಸರಿಗೆ ಡೌಟ್ ಇದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ, ಪಿಎಸ್‌ಐ ನಾರಾಯಣ ಮಧುಗಿರಿ ಮತ್ತು ಸಿಬ್ಬಂದಿಯವರಾದ ಎಎಸ್‌ಐ ಚೂಡಾಮಣಿ, ಪುನೀತ್, ಸಂದೀಪ್, ಗುರುನಾಯ್ಕ್, ರಾಜೇಶ್ ಗೌಡ ಪಾಟೀಲ್ ಹಾಗೂ ಪುಟ್ಟಮ್ಮ ಎನ್. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor