ಬಿಪಿ, ಶುಗರ್, ಅಸ್ತಮ, ತಲೆ ನೋವು, ಗ್ಯಾಸ್ಟಿಕ್​ ಇದೆಯಾ! ನಾಳೆ ಕೋಟೆಯಲ್ಲಿದೆ ವಿಶೇಷ ಸದಾವಕಾಶ

ಹಂಚಿಕೊಳ್ಳಿ
WhatsApp Facebook X Telegram
ಮಾಹಿತಿಗಾಗಿ ಸಾಂದರ್ಭಿಕ ಎಐ ಚಿತ್ರ

Sri Rishi Prabhakar Guruji / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶ್ರೀ ಋಷಿ ಪ್ರಭಾಕರ್‌ಗುರುಜಿಯವರ ಪ್ರಣಿತವಾದ ಧ್ಯಾನ, ಪ್ರಾಣಾಯಾಮ ಮತ್ತು ಯೋಗ ನಿದ್ರಾಭ್ಯಾಸದ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಪರಿಚಯ ಕಾರ್ಯಕ್ರಮವನ್ನು ನಾಳೆ ಅಂದರೆ ಜು.12ರ ಭಾನುವಾರ ಸಂಜೆ 6 ಕ್ಕೆ ನಗರದ ಕೋಟೆ ರಸ್ತೆ ಕೋಟೆ ಬಯಲು ರಂಗಮಂದಿರದಲ್ಲಿ ಆಯೋಜಿಸಿದೆ.

ಸುಸ್ತಾಗುವ ಅನುಭವವಾಗುತ್ತಿದ್ದರೆ, ಕಾಯಿಲೆ ಏನೂ ಇಲ್ಲದಿದ್ದರೂ ನಿರುತ್ಸಾಹವಾಗುತ್ತಿದ್ದರೇ, ಬೀಡಿ, ಸಿಗರೇಟ್, ಕಾಫಿ, ಟೀ, ತಂಬಾಕು, ಮದ್ಯಪಾನ ಅಭ್ಯಾಸಗಳಿಂದ ಹೈರಾಣಾಗಿದ್ದೀರೇ. ದೀರ್ಘ ಕಾಲದಿಂದ ಅಥವಾ ಇತ್ತೀಚೆಗೆ ಬಂದ ಬಿಪಿ ಶುಗರ್, ಅಸ್ತಮ, ಸಂದಿ ನೋವು, ತಲೆ ನೋವು, ಗ್ಯಾಸ್ಪಿಟಿಕ್ಸ್ ಮತ್ತಿತರ ಯಾವುದಾದರೂ ಕಾಯಿಲೆ ಇದ್ದರೇ, ಮನಸ್ಸಿನ ಏಕಾಗ್ರತೆ ನಿಯಂತ್ರಣದಲ್ಲಿಲ್ಲದಿದ್ದರೇ, ಮನಸ್ಸಿನಲ್ಲಿ ಯಾವಾಗಲೂ ಉದ್ವೇಗ ಒತ್ತಡದ ಅನುಭವವಾಗುತ್ತಿದ್ದರೇ? ಮತ್ತು ಇನ್ನಿತರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುಲು ಇದೊಂದು ಸದಾವಕಾಶವಾಗಿದೆ .

ಹತ್ತು ಹಲವು ಆರೋಗ್ಯ ಹಾಗೂ ಮಾನಸಿಕ ಸಮಸ್ಯೆಗಳಿಂದ ಮುಕ್ತರಾಗಲು ಶಿಬಿರ ಅನುವು ಮಾಡಿಕೊಡುತ್ತಿದ್ದು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಕೋರಿದ್ದಾರೆ. ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9986052851, 9342758707 ಅನ್ನು ಸಂಪರ್ಕಿಸಬಹುದಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor