INFORMATION NEWS

ಯುವಜನರಿಗೆ ಸುವರ್ಣಾವಕಾಶ, ಶಿವಮೊಗ್ಗ ಜಿಟಿಟಿಸಿಯಲ್ಲಿ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

GTTC Shivamogga / ಮಲೆನಾಡು ಟುಡೆ / ಶಿವಮೊಗ್ಗ / 2026-27ನೇ ಸಾಲಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ)ದಲ್ಲಿ ಎಐಟಿಟಿ- ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ವಿವಿಧ ಕೌಶಲ್ಯಾಭಿವೃದ್ದಿ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಐಟಿಐ ಪೂರೈಸಿದವರಿಗೆ 4 ತಿಂಗಳ ಸಿ.ಏನ್.ಸಿ. ಆಪರೇಟರ್ – ವರ್ಟಿಕಲ್ ಮಷಿನ್ನಿಂಗ್ ಸೆಂಟರ್, ಡಿಪ್ಲೋಮ /ಬಿ.ಇ ಪೂರೈಸಿದವರಿಗೆ 4 ತಿಂಗಳ ಸಿ ಏನ್ ಸಿ ಪ್ರೋಗ್ರಾಮರ್ /ಪ್ರೊ-ಇ / ಆಟೋ ಕ್ಯಾಡ್/ ಐಓಟಿ, ಎಸ್.ಎಸ್.ಎಲ್.ಸಿ. ಪೂರೈಸಿದವರಿಗೆ 4 ತಿಂಗಳ ಮಿಲ್ಲರ್/ಟರ್ನರ್ ಹಾಗೂ 12 ತಿಂಗಳ ಟೂಲ್ ರೂಮ್ ಮಷಿನಿಸ್ಟ್ ತರಬೇತಿಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತರಬೇತಿ ಮುಗಿದ ನಂತರ ತಾಂತ್ರಿಕ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗುವುದು. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳಿಗೆ ರೂ. 2500/- ಶಿಷ್ಯವೇತನ ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಯಸ್ಸು, ವಿದ್ಯಾರ್ಹತೆಯ ದಾಖಲಾತಿಗಳು ಹಾಗು ವೈಯಕ್ತಿಕ ವಿವರಗಳೊಂದಿಗೆ ಪ್ರಾಂಶುಪಾಲರು, ಜಿಟಿಟಿಸಿ, ಪ್ಲಾಟ್ ನಂ.ಸಿಎ 38,ನಿದಿಗೆ ಇಂಡಸ್ಟ್ರಿಯಲ್ ಏರಿಯಾ, ಮಾಚೇನಹಳ್ಳಿ ಇಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ. ಸಂ: 08182-246054/9448307027/ 9449286543 ಗಳನ್ನು ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿರುತ್ತಾರೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ