ಶಿವಮೊಗ್ಗ : ಹುಲ್ಲಿನ ಪಿಂಡಿಗೆ ವಿದ್ಯುತ್​​ ತಂತಿ ತಗುಲಿ ಬೆಂಕಿ ಅವಘಡ, ತಪ್ಪಿದ ಭಾರಿ ಅನಾಹುತ

ಹಂಚಿಕೊಳ್ಳಿ
WhatsApp Facebook X Telegram
Bhadravathi Tractor Fire
Bhadravathi Tractor Fire

ಸುದ್ದಿಯ ಸ್ಥಳ: Bhadravati, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಪ್ರತಿ ವರ್ಷ ನವೆಂಬರ್​ ಹಾಗೂ ಡಿಸೆಂಬರ್​ ತಿಂಗಳಲ್ಲಿ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಭತ್ತದ ಕೊಯ್ಲಿನ ಕಟಾವು ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ಕಟಾವು ಮಾಡಿದ ಹುಲ್ಲಿನ ಪಿಂಡಿಯನ್ನು ಟ್ರ್ಯಾಕ್ಟರ್​ನಲ್ಲಿ ಕೊಂಡೊಯ್ಯುವಾಗ ಇಳಿಬಿದ್ದ ವಿದ್ಯುತ್​​ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸುವ ಪ್ರಕರಣಗಳು ಪ್ರತಿವರ್ಷ ಕಂಡು ಬರುತ್ತಿವೆ. ಅದರಂತೆಯೇ ಈ ಬಾರಿಯೂ ಸಹ ಭದ್ರಾವತಿ ತಾಲೂಕಿನ ಧಡಂಘಟ್ಟ ಗ್ರಾಮದಲ್ಲಿ ಟ್ರ್ಯಾಕ್ಟರ್​ನಲ್ಲಿ ಹುಲ್ಲನ್ನು ಸಾಗಿಸುತ್ತಿದ್ದ ವೇಳೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ.

ಹೌದು, ಧಡಂಘಟ್ಟ ಗ್ರಾಮದಲ್ಲಿ ಒಣಹುಲ್ಲನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗೆ ವಿದ್ಯುತ್​ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಕ್ಷಣ ಮಾತ್ರದಲ್ಲಿ ಟ್ರ್ಯಾಕ್ಟರ್​ ತುಂಬಾ ಆವರಿಸಿದ ಬೆಂಕಿಯಿಂದಾಗಿ ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ಟ್ರ್ಯಾಕ್ಟರ್​ನ ಟ್ರ್ಯಾಲಿಯನ್ನು ಮೇಲಕ್ಕೆ ಎತ್ತಿದ್ದಾರೆ. ಇದರಿಂದ ಟ್ರ್ಯಾಕ್ಟರ್​ಗೆ ಜಾಸ್ತಿ ಹಾನಿಯಾಗದೆ ಹುಲ್ಲಿನ ಪಿಂಡಿಗಳು ಕೆಳಗೆ ಬಿದ್ದು ಸುಟ್ಟು ಹೋಗಿವೆ.

ಕೂಡಲೇ ನೆರವಿಗೆ ಧಾವಿಸಿದ ಸ್ಥಳೀಯರು ನೀರನ್ನು ಹಾಕುವ ಮೂಲಕ ಬೆಂಕಿಯನ್ನು ನಂದಿಸಿ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor