ಕೆ.ಆರ್. ಘಟಕ ದುರಸ್ತಿ , ಶಿವಮೊಗ್ಗದಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ! ಒಂದೆರಡು ದಿನವಲ್ಲ!

ಹಂಚಿಕೊಳ್ಳಿ
WhatsApp Facebook X Telegram
Shimoga Water Supply Disruption on Feb 7 and 8 Due to Maintenance
Shimoga Water Supply Disruption on Feb 7 and 8 Due to Maintenance

shimoga drinking water supply / ಮಲೆನಾಡು ಟುಡೆ / ಶಿವಮೊಗ್ಗ / ವಾರ್ತಾ ಇಲಾಖೆ ಸುದ್ದಿ / ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ ಎಂದು ಅಧಿಕೃತವಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ನಿರ್ದಿಷ್ಟ ದಿನವಲ್ಲದೆ, ಕಾಮಗಾರಿವೊಂದು ಮುಗಿಯುವರೆಗೂ ಈ ಸಮಸ್ಯೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ ಕ್ಲಾರಿಫ್ಲೋಕ್ಯೂಲೇಟರ್‌ನಲ್ಲಿ ನೀರು ಸೋರುವಿಕೆಯಾಗುತ್ತಿದೆಯಂತೆ. ಈ ಕಾರಣಕ್ಕಾಗಿ ಈ ಘಟಕದ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಾಗಿದೆ. ಈ ಕಾಮಗಾರಿ ಮುಕ್ತಾಯವಾಗುವವರೆಗೂ ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದು ಪ್ರಕಟಣೆಯ ಸಾರಾಂಶ

ಸಾರ್ವಜನಿಕರು ಈ ಪರಿಸ್ಥಿತಿಯನ್ನು ಅರಿತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಹಕರಿಸಬೇಕಾಗಿ ಶಿವಮೊಗ್ಗದ ಕನನೀಸ ಮತ್ತು ಒಳ ಮಂಡಳಿ ನಿರ್ವಹಣೆ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ​.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor