ಯುವತಿಯ ಆತ್ಮಹತ್ಯೆ & ಬಾಲಕನ ದುರ್ಮರಣ! ಶಿವಮೊಗ್ಗವನ್ನ ಬಾಧಿಸಿತು ಪ್ರಕರಣ!

ಹಂಚಿಕೊಳ್ಳಿ
WhatsApp Facebook X Telegram
Tirthahalli Road Accident

Tirthahalli Road Accident / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ / ಜಿಲ್ಲೆಯಲ್ಲಿ ನಡೆದ ಎರಡು ಘಟನೆಗಳು ಹೀಗಾಗಬಾರದಿತ್ತು ಎಂಬ ಉದ್ಘಾರದ ಜೊತೆಜೊತೆಗೆ, ಮನಸ್ಸನ್ನು ಬಾಧಿಸುವ ಯಾತನೆಗೆ ಸಾಕ್ಷಿಯಾಗಿವೆ. ಶಿವಮೊಗ್ಗ ನಗರದಲ್ಲಿ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ತೀರ್ಥಹಳ್ಳಿಯಲ್ಲಿ ರಸ್ತೆ ಅಪಘಾತದಲ್ಲಿ 6 ವರ್ಷದ ಬಾಲಕ ಮೃತಪಟ್ಟಿರುವ ಎರಡು ಪ್ರತ್ಯೇಕ ದುರ್ಘಟನೆಗಳು ಭಾನುವಾರ ವರದಿಯಾಗಿವೆ.

ಕಾರು ಹರಿದು 6 ವರ್ಷದ ಬಾಲಕ ಸಾವು

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪತ್ರಕರ್ತ ಪ್ರಗತ್ ಕೆ.ಆರ್. ಮತ್ತು ರಂಜನ ದಂಪತಿಯ ಪುತ್ರ ಋಷ್ಯ ಪಿ (6) ಮೃತಪಟ್ಟಿದ್ದಾನೆ. ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡುಗದ್ದೆ ಸಮೀಪ ಬಾಲಕ ರಸ್ತೆ ದಾಟುತ್ತಿದ್ದ ವೇಳೆ ಕ್ಯಾಂಟರ್ ವಾಹನ ಅಡ್ಡವಾಗಿ ನಿಂತಿದ್ದ ಕಾರಣ ಎದುರಿನಿಂದ ಬರುತ್ತಿದ್ದ ಕಾರು ಗಮನಕ್ಕೆ ಬಂದಿರಲಿಲ್ಲ. ಪರಿಣಾಮ ಕಾರಿನಡಿ ಸಿಲುಕಿದ ಬಾಲಕ ಗಾಯಗೊಂಡಿದ್ದಾನೆ. ತಕ್ಷಣ ತೀರ್ಥಹಳ್ಳಿಯ ಜೆ.ಸಿ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ , ಋಷ್ಯ ದಂಪತಿಯ ಏಕೈಕ ಪುತ್ರನಾಗಿದ್ದು, ಕೊಣಂದೂರಿನ ಖಾಸಗಿ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ .

ಮನೆಯ ಫ್ಯಾನ್‌ಗೆ ನೇಣು ಬಿಗಿದು ಯುವತಿ ಆತ್ಮಹತ್ಯೆ

ಶಿವಮೊಗ್ಗ ನಗರದ ಕೀರ್ತಿನಗರ ಬಡಾವಣೆಯ 1ನೇ ಕ್ರಾಸ್ ನಿವಾಸಿ ರಂಜಿತಾ (22) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮನೆಯ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು . ವಿನೋಬನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೇಸ್ ಮಹಜರ್​ ಮುಗಿಸಿ, ತನಿಖೆ ನಡೆಸಿದದಾರೆ. ಇನ್ನೂ ಸಣ್ಣದೊಂದು ಜಗಳ ಯುವತಿ ಸಾವಿಗೆ ಕಾರಣ ಎನ್ನಲಾಗುತ್ತಿದ್ದು, ಈ ಬಗ್ಗೆ ಎನ್​ಕ್ವೈರಿ ಮುಂದುವರಿದಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor