ತೀರ್ಥಹಳ್ಳಿ / ತಾಲ್ಲೂಕಿನ ಹುಂಚದಕಟ್ಟೆ ಸಮೀಪ ಊರೊಂದರಲ್ಲಿ ಬೈಕ್ ವ್ಯಾಪಾರ ಮಾಡಿ ದುಡ್ಡು ಕೊಟ್ಟಿದ್ದರೂ ಸಹ, ರೆಕಾರ್ಡ್ ನೀಡದ ವಿಚಾರಕ್ಕೆ ಕಿರಿಕ್ ಆಗಿ ಹೊಡೆದಾಟ ಆಗಿದೆ. ಸಂಬಂಧಿಸಿದಂತೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿ, ವಸ್ತುಗಳನ್ನು ಧ್ವಂಸಗೊಳಿಸಿರುವ ಘಟನೆ ಬಗ್ಗೆ ವರದಿಯಾಗಿದ್ದು ಸ್ಟೇಷನ್ನಲ್ಲಿ ಕಂಪ್ಲೆಂಟ್ ಸಹ ಆಗಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಸುದ್ದಿಗಳನ್ನು ಇಲ್ಲಿ ಗಮನಿಸಿ : ತೀರ್ಥಹಳ್ಳಿ
ಒಟ್ಟಾರೆ ನಡೆದಿದ್ದೇನು?
ದಾಖಲಾದ ಕಂಪ್ಲೆಂಟ್ ಪ್ರಕಾರ, ಸಂತ್ರಸ್ತರು ತಮ್ಮ ಪಕ್ಕದ ಊರಿನವರೊಬ್ಬರ ಬೈಕ್ ತಗೊಂಡು ದುಡ್ಡುಕೊಟ್ಟಿದ್ದರು. ಆದರೆ ಬೈಕ್ ಲೋನ್ ಕ್ಲಿಯರೆನ್ಸ್ ಲೆಟರ್ ಎನ್ಇಸಿ ಕೊಟ್ಟಿರಲಿಲ್ಲ. ಹೀಗಾಗಿ ಎನ್ಒಸಿ ಕೊಡ್ಬೇಕಲ್ಲಾ ಅಂಥಾ ಕೇಳಿದ್ದಾರೆ. ಈ ವಿಚಾರಕ್ಕೆ ಮಾತುಕತೆ ಆಗಿದೆ. ಪರಿಣಾಮ ಬೈಕ್ ಕೊಟ್ಟವನು ತನ್ನ ಸ್ನೇಹಿತರ ಜೊತೆಗೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ರು ಅನ್ನೋದು ದೂರು ಅಲ್ಲದೆ ಕಿಟಕಿ , ಬಾಗಿಲಗೆ ಕತ್ತಿಯಿಂದ ಹೊಡೆದು, ಮನೆಯಿಂದ ಹೊರಗೆ ಬಾರದಂತೆ ಜೀವ ಸಹಿತ ಬಿಡಲ್ಲ ಅಂತಾ ಹೆದರಿಸಿ ಹೋಗಿದ್ದಾರಂತೆ. ಅಲ್ಲದೆ ಸಿಸಿ ಕ್ಯಾಮರಾ, ಹೂಕುಂಡ ಎಲ್ಲಾ ಒಡೆದುಹಾಕಿ, ಸಂತ್ರಸ್ತರ ಹೆಂಡತಿ ಮೇಲೂ ಹಲ್ಲೆ ಮಾಡಿದ್ದಾರಂತೆ. ಇದೇ ವೇಳೆ ಪಕ್ಕದ ಮನೆಯವರು ಕೂಗಾಟ ಕೇಳಿ ಬಂದಿದ್ದಾರೆ. ಇದನ್ನು ಕಂಡು ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂಬುದು ವೃತ್ತಾಂತ. ಸದ್ಯ ಈ ಸಂಬಂಧ ಕೇಸ್ ದಾಖಲಾಗಿದ್ದು ತಿರ್ಥಹಳ್ಳಿ ಪೊಲೀಸ್ ಠಾಣೆ ಪೊಲೀಸರು ಎನ್ಕ್ವೈರಿ ಮಾಡ್ತಿದ್ದಾರೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ತೀರ್ಥಹಳ್ಳಿ Thirthahalli Attack: Gang Trespasses House Over Bike Documents, Steals Gold Chain ಬೈಕ್ ದಾಖಲಾತಿಗಾಗಿ ಮನೆಗೆ ನುಗ್ಗಿ ಹಲ್ಲೆ, ಸರ ಅಪಹರಣ
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.