ಶಿವಮೊಗ್ಗ /ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ಚೈತ್ರ ಮಾಸ ಕೃಷ್ಣ ಪಕ್ಷದ ತಿಥಿಯು ಬೆಳಿಗ್ಗೆ 8.31 ರವರೆಗೆ ಇರಲಿದೆ. ತದನಂತರ ತೃತೀಯ ತಿಥಿ ಆರಂಭವಾಗಲಿದೆ. ಸ್ವಾತಿ ನಕ್ಷತ್ರವು , ರಾತ್ರಿ 8.11 ರವರೆಗೆ ಇರಲಿದೆ, ಬಳಿಕ ವಿಶಾಖ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಘಳಿಗೆಯು ಬೆಳಿಗ್ಗೆ 10.41 ರಿಂದ 12.26 ರವರೆಗೆ ಒದಗಿಬರಲಿದೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಇವತ್ತಿನ ರಾಶಿಭವಿಷ್ಯ /Today Horoscope in Kannada April 4
ಮೇಷ / ಆರ್ಥಿಕ ಪರಿಸ್ಥಿತಿಯು ಇಂದು ಆಶಾದಾಯಕವಾಗಿರಲಿದ್ದು, ಆಪ್ತರ ಸಹಾಯದಿಂದ ಮುನ್ನಡೆಯಲಿದ್ದಾರೆ ಹಾಗೂ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಹೊಸ ಉತ್ಸಾಹ ಕಂಡುಬರಲಿದೆ.
ವೃಷಭ / ಹೊಸ ಕಾರ್ಯಗಳಿಗೆ ಚಾಲನೆ, ಶುಭ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ. ಹಳೆಯ ಬಾಕಿಗಳು ವಸೂಲಾಗಲಿದ್ದು, ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದಾರೆ.
ಮಿಥುನ / ಆರ್ಥಿಕ ವಹಿವಾಟಿನಲ್ಲಿ ವಿಳಂಬವಾಗಲಿದ್ದು, ಸಾಲಕ್ಕಾಗಿ ಪ್ರಯತ್ನಿಸುವ ಸಾಧ್ಯತೆಯಿದೆ. ಮನೆಯ ಒಳಗೆ ಹಾಗೂ ಹೊರಗೆ ಒತ್ತಡ ಹೆಚ್ಚಾಗಲಿವೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಕೊಂಚ ಅತೃಪ್ತಿ ಮೂಡಲಿದೆ.
ಕರ್ಕಾಟಕ / ಕೆಲಸಗಳನ್ನು ಮುಂದೂಡಲಿದ್ದು, ದೂರ ಪ್ರಯಾಣ ಕೈಗೊಳ್ಳಲಿದ್ದಾರೆ. ವಿದ್ಪುಣ್ಯಕ್ಷೇತ್ರಗಳ ದರ್ಶನ ಪಡೆಯಲಿದ್ದಾರೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಬದಲಾವಣೆಗಳು ಕಂಡುಬರಲಿವೆ.
ಸಿಂಹ / ಹೊಸ ವಿಚಾರಗಳನ್ನು ಕಲಿಯಲಿದ್ದು, ಪ್ರಭಾವ ಹೆಚ್ಚಾಗಲಿದೆ. ಆಪ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದ್ದು,ವ್ಯಾಪಾರ ಹಾಗೂ ಉದ್ಯೋಗದಲ್ಲಿದ್ದ ಕಿರಿಕಿರಿ ನಿವಾರಣೆಯಾಗಲಿವೆ.
ಕನ್ಯಾ / ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗಲಿದ್ದು, ಆರ್ಥಿಕ ವಿಚಾರ ನಿರಾಶೆ ತರಲಿವೆ. ಸಂಬಂಧಿಕರೊಂದಿಗೆ ವಿವಾದ ಹಾಗೂ ಅನಾರೋಗ್ಯ ಕಾಡಲಿದೆ. ಉದ್ಯೋಹ ಮತ್ತು ವ್ಯಾಪಾರ ಮಂದಗತಿಯಲ್ಲಿ ಸಾಗಲಿದೆ
ತುಲಾ / ಹೊಸ ಕೆಲಸ ಆರಂಭಿಸಲಿದ್ದು,ವ್ಯಾಪಾರ ಹಾಗೂ ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ವೃಶ್ಚಿಕ / ವ್ಯವಹಾರಗಳಲ್ಲಿ ಸಣ್ಣಪುಟ್ಟ ಅಡೆತಡೆ ಎದುರಾಗಲಿದ್ದು, ಖರ್ಚು ಹೆಚ್ಚಾಗಲಿದೆ. ಮನೆಯಲ್ಲಿ ಹಾಗೂ ಹೊರಗೆ ಜವಾಬ್ದಾರಿ ಹೆಚ್ಚಾಗಲಿದ್ದು,ಉದ್ಯೋಗ ಮತ್ತು ವ್ಯಾಪಾರವು ಆಮೆಗತಿಯಲ್ಲಿ ಸಾಗಲಿದೆ.
ಧನುಸ್ಸು / ನೂತನ ಉದ್ಯೋಗ ಪ್ರಾಪ್ತಿಯಾಗಲಿದ್ದು, ಸಮಾಜದಲ್ಲಿ ಗೌರವ ಲಭಿಸಲಿದೆ. ಬೆಲೆಬಾಳುವ ವಸ್ತುಗಳನ್ನು ಖರೀದಿ, ಗಣ್ಯರೊಂದಿಗೆ ಒಡನಾಟ ಬೆಳೆಯಲಿದೆ. ಉದ್ಯೋಗ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.
ಮಕರ / ಕೆಲಸಗಳು ಸರಾಗವಾಗಿ ನಡೆಯಲಿದ್ದು, ಆರ್ಥಿಕ ಸ್ಥಿತಿಯು ಭರವಸೆ ಮೂಡಿಸಲಿದೆ. ಆಪ್ತರೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಯಲಿದ್ದು, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಹೊಸ ಹುಮ್ಮಸ್ಸು ಮೂಡಲಿದೆ.
ಕುಂಭ / ಸಣ್ಣಪುಟ್ಟ ವಿಘ್ನ ಎದುರಾಗಲಿದ್ದು, ಆರ್ಥಿಕ ಪರಿಸ್ಥಿತಿಯು ಸಾಥ್ ನೀಡುವುದಿಲ್ಲ. ಆಸ್ತಿ ವಿವಾದ ತಲೆದೋರಲಿದ್ದು, ಪುಣ್ಯಕ್ಷೇತ್ರಗಳ ದರ್ಶನ ಮಾಡಲಿದ್ದಾರೆ. ಉದ್ಯೋಗ ಹಾಗೂ ವ್ಯಾಪಾರ ಸಾಧಾರಣವಾಗಿರಲಿದೆ.
ಮೀನ/ ಮನೆಯಲ್ಲಿ ಹಾಗೂ ಹೊರಗಡೆ ಒತ್ತಡವನ್ನು ಎದುರಿಸಲಿದ್ದಾರೆ. ಆಧ್ಯಾತ್ಮಿಕ ಒಲವು ಹೆಚ್ಚಾಗಲಿದ್ದು, ಕೆಲಸಗಳು ಮುಂದೂಡಲ್ಪಡಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಸಾಮಾನ್ಯ ದಿನ

Today Horoscope in Kannada April 4 Daily Astrology, Land and Vehicle Yog
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
