ಶಿವಮೊಗ್ಗದಲ್ಲಿ ಮತ್ತೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ! ಹೈಟೆಕ್​ ಆದ ಮಾತೃವಾತ್ಸಲ್ಯ ಹೆಲ್ತ್ ಕೇರ್!

ಹಂಚಿಕೊಳ್ಳಿ
WhatsApp Facebook X Telegram
Mathruvatsalya Health Care 100-Bed Multi-Speciality Hospital in Shivamogga to Open on Nov 29
Mathruvatsalya Health Care 100-Bed Multi-Speciality Hospital in Shivamogga to Open on Nov 29

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದಲ್ಲಿ ಮತ್ತೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎದ್ದು ನಿಂತಿದೆ. ಪಾರ್ಕ್ ಬಡಾವಣೆಯಲ್ಲಿರುವ ಮಾತೃವಾತ್ಸಲ್ಯ ಹೆಲ್ತ್ ಕೇರ್ ಆಸ್ಪತ್ರೆಯು 100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಿ ಪರಿವರ್ತನೆ ಆಗಿದೆ. ಇದೆ ನವೆಂಬರ್ 29ರ ಭಾನುವಾರ ಬೆಳಿಗ್ಗೆ 11.30ಕ್ಕೆ ಉದ್ಘಾಟನೆಯಾಗಲಿದೆ ಎಂದು ಆಸ್ಪತ್ರೆಯ ಚೇರ್ಮನ್ ಡಾ. ಬಿ. ಸಿ. ಪೃಥ್ವಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾತೃವಾತ್ಸಲ್ಯ ಹೆಲ್ತ್ ಕೇರ್

ಈ ಕುರಿತಾಗಿಯೇ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಹಿರಿಯ ವೈದ್ಯರಾದ ಡಾ. ಪಿ. ನಾರಾಯಣ, ಡಾ. ಎಸ್. ಐ. ಬಿರಾದರ್, ಡಾ. ನಿರ್ಮಲ ಹೆಚ್.ಟಿ., ಡಾ. ರಜನಿ ಎ. ಪೈ, ಡಾ. ಎ. ಶಿವರಾಮಕೃಷ್ಣ, ಡಾ. ಪಿ. ಲಕ್ಷ್ಮೀನಾರಾಯಣ ಆಚಾರ್ ಹಾಗೂ ಡಾ. ಧನಂಜಯ್‌ ಸರ್ಜಿ ಅವರುಗಳಿಂದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್, ಹೃದಯರೋಗ, ಜನರಲ್ ಹಾಗೂ ಲ್ಯಾಪ್ರೋಸ್ಕೋಪಿಕ್ ಸರ್ಜರಿ, ಮೂಳೆ ರೋಗ, ಮಕ್ಕಳ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ, ಮೂತ್ರ ರೋಗ, ಚರ್ಮ ರೋಗ, ನರರೋಗ ಮತ್ತು ಮೆದುಳು ಶಸ್ತ್ರಚಿಕಿತ್ಸೆ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಇದರೊಂದಿಗೆ 24×7 ಅಪಘಾತ ಆರೈಕೆ, 24×7 ತುರ್ತು ಚಿಕಿತ್ಸಾ ಸೇವೆ, 24×7 ಕ್ಯಾತ್‌ಲ್ಯಾಬ್, 24×7 ಆಂಬುಲೆನ್ಸ್, 24×7 ಸಿಟಿಸ್ಕ್ಯಾನ್, ಎಕ್ಸ್-ರೇ, ಇಕೋಸ್ಕಾನ್, 24×7 ಫಾರ್ಮಸಿ, ಲ್ಯಾಬೋರೇಟರಿ ಮತ್ತು ಡಯಾಗ್ನೋಸ್ಟಿಕ್ ಸೇವೆಗಳು ಲಭ್ಯವಿರಲಿವೆ ಎಂದು ಡಾ. ಬಿ. ಸಿ. ಪೃಥ್ವಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತೃವಾತ್ಸಲ್ಯ ಹೆಲ್ತ್‌ಕೇರ್‌ನ ಚೇರ್ಮನ್ ಡಾ. ಪೃಥ್ವಿ ಬಿ.ಸಿ. ಹಾಗೂ ಹೃದಯ ವಿಭಾಗದ ನಿರ್ದೇಶಕರಾದ ಡಾ. ಮಹೇಶ್ ಮೂರ್ತಿ ಬಿ. ಆರ್. ಉಪಸ್ಥಿತರಿದ್ದರು. ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅಮಿತ ಹೆಗ್ಡೆ, ಡಾ. ಗೀತಾ ರವಿ, ಡಾ. ನಾಗಮಣಿ ಎಂ. ಸಿ., ಡಾ. ಮಿಥುನ್ ಎನ್. ಕಗಲ್ಕರ್, ಡಾ. ಸಂತೋಷ್ ಕೊಪ್ಪಳ್, ಡಾ. ಪಿಯೂಷ್ ಎಂ. ಕವಾಡ್, ಡಾ. ಸಚಿನ್ ಉತ್ಪಾಳ್, ಡಾ. ಭರತ್ ಜಿ. ಓ., ಡಾ. ನಿತಿನ್ ಎಸ್. ಶಾಗಲೆ, ಡಾ. ವಿದ್ಯಾ ಬಿ. ಯು., ಡಾ. ಸಿಂಧು ರಶ್ಮಿ ಜಿ. ಎ. ಹಾಗೂ ಡಾ. ಪ್ರಾಂಜಲ್ ಮರ್ಲೆಚಾ ಹಾಜರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor