ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ/ ಆಟೋ ಡಿಕ್ಕಿ ಆದ್ದರಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರಿಗೆ ಅಕ್ಕ ಪಡೆ ಸಿಬ್ಬಂದಿ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೆಟ್ರೋ ಆಸ್ಪತ್ರೆಗೆ ಕಳುಹಿಸಿಕೊಟ್ಟ ಘಟನೆ ಬಗ್ಗೆ ಶಿವಮೊಗ್ಗ ಪೊಲೀಸ್ ಮಾಧ್ಯಮ ಗ್ರೂಪ್ನಲ್ಲಿ ಮಾಹಿತಿ ನೀಡಲಾಗಿದೆ.
ಕಳೆದ ನವೆಂಬರ್ 24 ರಂದು ಈ ಘಟನೆ ನಡೆದಿದ್ದು, ವಿವರ ಹೀಗಿದೆ. ಅಕ್ಕಪಡೆ ಸಿಬ್ಬಂದಿ ಎಲ್.ಬಿ.ಎಸ್. ನಗರದಲ್ಲಿ ಗಸ್ತು ಮುಗಿಸಿ ವಾಪಸ್ ಆಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಜನರು ಗುಂಪುಗೂಡಿದ್ದನ್ನು ಗಮನಿಸಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿದಾಗ ಅಲ್ಲಿ ಅಪಘಾತವಾಗಿರುವುದು ಗೊತ್ತಾಗಿದೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯ ಉಪಚಾರಕ್ಕೆ ಮುಂದಾಗಿದ್ದಾರೆ. ಆಕೆಗೆ ಪ್ರಥಮ ಚಿಕಿತ್ಸೆ ನೀಡಿದರಷ್ಟೆ ಅಲ್ಲದೆ ಆಸ್ಪತ್ರೆಗೆ ರವಾನಿಸಿ ಟ್ರೀಟ್ಮೆಂಟ್ಗೆ ವ್ಯವಸ್ಥೆ ಮಾಡಿದರು. ಇತ್ತ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ ಅಪಘಾತಕ್ಕೆ ಕಾರಣವಾದ ಆಟೋ ಪತ್ತೆಗೆ ವಿವರ ನೀಡಿದರು
ಈ ವೇಳೆ ಅಕ್ಕ ಪಡೆಯ ಹೇಮಾವತಿ (WASI), ಆಕಾಂಕ್ಷಾ ರವಿ (WPC), ಸುಪ್ರಿಯ ಕೆ. (WHG) ಹಾಗೂ ವಿದ್ಯಾಶ್ರೀ ಕೆ. (WHG) ರವರಿದ್ದರು
