ಶಿವಮೊಗ್ಗ : ವರದಕ್ಷಿಣೆ ಕಿರುಕುಳ, ಕೊಲೆ ಬೆದರಿಕೆ! ಟಿಪ್ಪುನಗರ ನಿವಾಸಿ ಮಹಮ್ಮದ್ ಇರ್ಷಾದ್​ಗೆ 3 ವರ್ಷ ಶಿಕ್ಷೆ

ಹಂಚಿಕೊಳ್ಳಿ
WhatsApp Facebook X Telegram
Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ
shivamogga court justice

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಗರದ ಟಿಪ್ಪುನಗರ ನಿವಾಸಿ ಮಹಮ್ಮದ್ ಇರ್ಷಾದ್ ಅವರಿಗೆ 2ನೇ ಜೆಎಂಎಫ್ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಮತ್ತು ₹14,000 ದಂಡ ವಿಧಿಸಿದೆ.

ವರದಕ್ಷಿಣೆ ಕಿರುಕುಳ, ಕೊಲೆ ಬೆದರಿಕೆ

ವರದಕ್ಷಿಣೆ ಹಣ ತರುವಂತೆ ಮಹಮ್ಮದ್ ಇರ್ಷಾದ್ ಅವರು ತಮ್ಮ ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎಂದು 2023ರಲ್ಲಿ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕ ಜಿ.ಕೆ.ಕಿರಣ್ ಕುಮಾರ್ ವಾದ ಮಂಡಿಸಿದ್ದರು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎನ್.ಕೆ.ಸಿದ್ದರಾಜು ಅವರು ಮಹಮ್ಮದ್ ಇರ್ಷಾದ್ ಅವರಿಗೆ ವಿವಿಧ ಕಲಂಗಳಡಿ ಶಿಕ್ಷೆ ಮತ್ತು ದಂಡ ವಿಧಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor