ಮಹಿಷಿಯ ತುಂಗಾ ನದಿಯಲ್ಲಿ ಬೆಂಗಳೂರಿನ 4 ಮಂದಿ ನೀರುಪಾಲು: ಎಸ್‌ಪಿ. ನಿಖಿಲ್.ಬಿ ಹೇಳಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
4 From Bengaluru Drown in Tunga River at Mahishi Shivamogga SP B. Nikhil Updates on Search Operation
4 From Bengaluru Drown in Tunga River at Mahishi Shivamogga SP B. Nikhil Updates on Search Operation

ಸುದ್ದಿಯ ಸ್ಥಳ: Bengaluru, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಷಿ ಸಮೀಪ ಸಿಗುವ ತುಂಗಾ ನದಿಯಲ್ಲಿ ಬೆಂಗಳೂರಿನಿಂದ ಬಂದಿದ್ದ 4 ಮಂದಿ ನಿನ್ನೆದಿನ ನೀರುಪಾಲಾಗಿದ್ದರು. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಮಾತನಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡ್ತಾ ಘಟನೆಯ ಕುರಿತು ಮಾಹಿತಿ ನೀಡಿದ ಅವರು, ಬೆಂಗಳೂರಿನಿಂದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ 4 ಮಂದಿ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳುವ ವೇಳೆ ಮಹಿಷಿ ಬಳಿಯ ತುಂಗಾ ನದಿಗೆ ಇಳಿದಿದ್ದರು.

ನೀರಿನಲ್ಲಿ ಆಟವಾಡಲು ತೆರಳಿದ್ದ ಸಂದರ್ಭದಲ್ಲಿ, ಒಬ್ಬ ವ್ಯಕ್ತಿ ಕಾಲು ಜಾರಿ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾರೆ. ಆತನನ್ನು ರಕ್ಷಿಸಿ ಮೇಲಕ್ಕೆ ಎಳೆದು ತರಲು ಉಳಿದ 3 ಮಂದಿ ನೀರಿಗೆ ಇಳಿದಿದ್ದು, ಈ ವೇಳೆ ಎಲ್ಲ 4 ಮಂದಿಯೂ ನೀರುಪಾಲಾಗಿದ್ದಾರೆ ಎಂದು ವಿವರಿಸಿದರು. ನೀರುಪಾಲಾದ 4 ಮಂದಿಯೂ ಬೆಂಗಳೂರಿನಿಂದ ಬಂದವರಾಗಿದ್ದಾರೆ. ಇವರಲ್ಲಿ 3 ಮಂದಿ ಕಾನೂನು (ಲಾ) ವಿದ್ಯಾಭ್ಯಾಸ ಮಾಡುತ್ತಿದ್ದು, ಒಬ್ಬಾತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಎಸ್‌ಪಿ. ನಿಖಿಲ್.ಬಿ ಹೇಳಿದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor