ತೀರ್ಥಹಳ್ಳಿ : 73 ವರ್ಷ ವಯಸ್ಸಿನ ವ್ಯಕ್ತಿ ಕಾಣೆ: ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ

ಹಂಚಿಕೊಳ್ಳಿ
WhatsApp Facebook X Telegram
Missing Senior Citizen K.P. Ramappa
Missing Senior Citizen K.P. Ramappa

Missing ಶಿವಮೊಗ್ಗ:  ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಳಲೂರು ಗ್ರಾಮದ ಕೇಳೂರು ನಿವಾಸಿ ಕೆ.ಪಿ. ರಾಮಪ್ಪ ಎಂಬ 73 ವರ್ಷದ ಹಿರಿಯ ನಾಗರಿಕರು ಕಾಣೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ.

ಶಿವಮೊಗ್ಗ: ಜುಲೈ 20 ರಿಂದ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ

ಕಳೆದ ಜುಲೈ 5 ರಂದು ಮಧ್ಯಾಹ್ನ ಸುಮಾರು 1:30 ರ ಸುಮಾರಿಗೆ ಯಾರಿಗೂ ತಿಳಿಸದೆ ಮನೆಯಿಂದ ಹೊರಟ ರಾಮಪ್ಪ ಅವರು ಇದುವರೆಗೂ ಮರಳಿ ಮನೆಗೆ ಬಂದಿರುವುದಿಲ್ಲ. ಕುಟುಂಬಸ್ಥರು ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲದ ಕಾರಣ, ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ. 

ನಾಪತ್ತೆಯಾಗಿರುವ ಕೆ.ಪಿ. ರಾಮಪ್ಪ ಅವರು ಸುಮಾರು 5.5 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣವನ್ನು ಹೊಂದಿದ್ದಾರೆ. ಇವರ ಎಡಗಿವಿಯಲ್ಲಿ ರಿಂಗ್ ಹಾಕುತ್ತಿದ್ದ ಸಣ್ಣ ತೂತಿನ ಗುರುತಿದ್ದು, ಮನೆಯಿಂದ ಹೊರಡುವಾಗ ಅವರು ಬಿಳಿ ಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಚಡ್ಡಿಯನ್ನು ಧರಿಸಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. 

ಈ ಹಿರಿಯ ನಾಗರಿಕರ ಬಗ್ಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಲಭ್ಯವಾದಲ್ಲಿ ಸಾರ್ವಜನಿಕರು ತಕ್ಷಣವೇ ಶಿವಮೊಗ್ಗ ಎಸ್‌ಪಿ ಕಚೇರಿಯ ದೂರವಾಣಿ ಸಂಖ್ಯೆ 08182-261400 ಅಥವಾ ತೀರ್ಥಹಳ್ಳಿ ಪೊಲೀಸ್ ಠಾಣೆಯ ಸಂಖ್ಯೆ 08181-220388 ಗೆ ಸಂಪರ್ಕಿಸಬಹುದು. ಇದರೊಂದಿಗೆ ಮಾಳೂರು ದೂರವಾಣಿ ಸಂಖ್ಯೆ 9480803333 ಅಥವಾ ಆಗುಂಬೆ ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆ 9480803314 ಕ್ಕೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಇವರನ್ನು ಪತ್ತೆ ಹಚ್ಚಲು ಸಹಕರಿಸಬೇಕಾಗಿ ಕೋರಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor