ಶಿವಮೊಗ್ಗ: ಸಾಲದ ಬಾಧೆಗೆ ಮನನೊಂದು ಆಟೋ ಚಾಲಕ ಆತ್ಮ*ಹತ್ಯೆ

ಹಂಚಿಕೊಳ್ಳಿ
WhatsApp Facebook X Telegram
Shivamogga35-Year-Old Auto Driver Manjunath Dies
Shivamogga35-Year-Old Auto Driver Manjunath Dies

Shivamogga ಶಿವಮೊಗ್ಗ: ಸಾಲದ ಬಾಧೆಯಿಂದ ಮನನೊಂದು ಆಟೋ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಶರಾವತಿ ನಗರ ಬಡಾವಣೆಯಲ್ಲಿ ನಡೆದಿದೆ. ಮಂಜುನಾಥ್ (35) ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕರಾಗಿದ್ದಾರೆ.

ಶಿವಮೊಗ್ಗ :  ಸಸ್ಯಹಾರಿ ಬರ್ಗರ್​ ಬದಲಿಗೆ ಮಾಂಸಹಾರಿ ಬರ್ಗರ್​​​ ಕೊಟ್ಟ ಸಂಸ್ಥೆಗೆ 20 ಸಾವಿರ ದಂಡ 

ಮಂಜುನಾಥ್ ಅವರು ಶಿವಮೊಗ್ಗದಲ್ಲಿ ಲಗೇಜ್ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಆಟೋ ಮೇಲೆ 30 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಅವರಿಗೆ ಈ ಸಾಲವನ್ನು ಸಕಾಲದಲ್ಲಿ ತೀರಿಸಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಸಾಲ ನೀಡಿದವರು ಅವರ ಆಟೋವನ್ನು ವಶಪಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. 

ಮಂಜುನಾಥ್ ಅವರ ಜೀವನೋಪಾಯಕ್ಕೆ ಆಟೋ ಒಂದೇ ಪ್ರಮುಖ ಆಧಾರವಾಗಿತ್ತು. ಯಾವಾಗ ಸಾಲ ನೀಡಿದವರು ಆಟೋವನ್ನು ತಮ್ಮ ವಶಕ್ಕೆ ಪಡೆದುಕೊಂಡರೋ, ಅಂದಿನಿಂದಲೂ ಮಂಜುನಾಥ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದೇ ಕಾರಣಕ್ಕೆ ತೀವ್ರ ಮನನೊಂದ ಅವರು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಈ ಘಟನೆಗೆ ಸಂಬಂಧಿಸಿದಂತೆ ಮಂಜುನಾಥ್ ಅವರ ಪತ್ನಿಯು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಪತಿಯು ಆತ್ಮಹತ್ಯೆ ಮಾಡಿಕೊಳ್ಳುವಂತೆ ಇಬ್ಬರು ವ್ಯಕ್ತಿಗಳು ಪ್ರಚೋದನೆ ನೀಡಿದ್ದಾರೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor