SHIVAMOGGA NEWS TODAY

ದಕ್ಷಿಣ ಭಾರತದಲ್ಲೇ ಪ್ರಥಮ: ಶಿವಮೊಗ್ಗದ ರಾಘವೇಂದ್ರ ಸ್ವಾಮಿ ಮಠಕ್ಕೆ ಒಲಿದ ಜಾಗತಿಕ ಮಟ್ಟದ ತ್ರಿವಳಿ ISO ಗೌರವ!

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shimoga Raghavendra Mutt ಶಿವಮೊಗ್ಗ : ದಕ್ಷಿಣ ಭಾರತದ ಧಾರ್ಮಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಶಿವಮೊಗ್ಗದ ದುರ್ಗಿ ಗುಡಿ ಉದ್ಯಾನವನದ ಬಳಿ ಇರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಅಂತರರಾಷ್ಟ್ರೀಯ ಮಟ್ಟದ ಮೂರು ಪ್ರತಿಷ್ಠಿತ ಐಎಸ್ಒ (ISO) ಪ್ರಮಾಣಪತ್ರಗಳು ಲಭಿಸಿವೆ. 

ಶಿವಮೊಗ್ಗ: ಜುಲೈ 20 ರಿಂದ ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ

ಗುಣಮಟ್ಟದ ಆಡಳಿತ, ಪರಿಸರ ನಿರ್ವಹಣೆ ಹಾಗೂ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆಯಲ್ಲಿ ತೋರಿದ ಅಪ್ರತಿಮ ಸಾಧನೆಗಾಗಿ ಮಠಕ್ಕೆ ಈ ಜಾಗತಿಕ ಮನ್ನಣೆ ದೊರೆತಿದೆ. ಸಾಮಾನ್ಯವಾಗಿ ಕಾರ್ಖಾನೆಗಳು ಮತ್ತು ದೊಡ್ಡ ಸೇವಾ ಸಂಸ್ಥೆಗಳಿಗೆ ಸಿಗುವ ಈ ಗೌರವವನ್ನು, ಸ್ವತಂತ್ರ ಮೌಲ್ಯಮಾಪನದ ಮೂಲಕ ತನ್ನ ಮುಡಿಗೇರಿಸಿಕೊಂಡ ದಕ್ಷಿಣ ಭಾರತದ ಮೊದಲ ಹಿಂದೂ ಮಠ ಎಂಬ ಹೆಗ್ಗಳಿಕೆಗೆ ರಾಯರ ಮಠ ಪಾತ್ರವಾಗಿದೆ. 

ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಯು ಕಳೆದ ಆರು ತಿಂಗಳುಗಳ ಕಾಲ ಮಠದ ಆಡಳಿತ ವ್ಯವಸ್ಥೆಯನ್ನು ಎಲ್ಲಾ ಆಯಾಮಗಳಿಂದ ಸೂಕ್ಷ್ಮವಾಗಿ ಪರಿಶೀಲಿಸಿ ಈ ಪ್ರಮಾಣಪತ್ರಗಳನ್ನು ನೀಡಿದೆ. ಮಠಕ್ಕೆ ದೊರೆತಿರುವ ತ್ರಿವಳಿ ಸರ್ಟಿಫಿಕೇಟ್‌ಗಳು ಹೀಗಿವೆ.

ಗುಣಮಟ್ಟದ ನಿರ್ವಹಣೆಗಾಗಿ ISO 9001:2015, ಪರಿಸರ ಸ್ನೇಹಿ ವ್ಯವಸ್ಥೆಗಾಗಿ ISO 14001:2015 ಮತ್ತು ಸುರಕ್ಷಿತ ಆಡಳಿತ ನಿರ್ವಹಣೆಗಾಗಿ ISO 45001:2018. ದಶಕಗಳಿಂದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ದಾಸೋಹ ಸೇವೆಗಳಲ್ಲಿ ನಿರತವಾಗಿರುವ ಮಠದ ಪಾರದರ್ಶಕತೆಗೆ ಸಂದ ಜಾಗತಿಕ ಜಯ ಇದಾಗಿದೆ. 

ಈ ಸುದೀರ್ಘ ಮೌಲ್ಯಮಾಪನದ ಅವಧಿಯಲ್ಲಿ ಅಧಿಕಾರಿಗಳು ಮಠದ ದೈನಂದಿನ ಧಾರ್ಮಿಕ ಕಾರ್ಯಕ್ರಮಗಳು, ಭಕ್ತರಿಗೆ ಕಲ್ಪಿಸಿರುವ ಸೌಲಭ್ಯಗಳು, ನೈರ್ಮಲ್ಯ, ಆರ್ಥಿಕ ಪಾರದರ್ಶಕತೆ, ಉಚಿತ ವೈದ್ಯಕೀಯ ಶಿಬಿರಗಳು ಹಾಗೂ ದತ್ತು ಪಡೆದ ಶಾಲೆಗಳ ನಿರ್ವಹಣೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಮಠವು ತನ್ನ ಸಮಾಜಮುಖಿ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದ್ದು, ಹೆಚ್ಚಿನ ಆರೋಗ್ಯ ಶಿಬಿರಗಳು, ವಿದ್ಯಾರ್ಥಿಗಳಿಗೆ ಧನಸಹಾಯ ಹಾಗೂ ಪರಿಸರ ಸಂರಕ್ಷಣಾ ಅಭಿಯಾನಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ. 

ಮಠದ ಈ ಅಭೂತಪೂರ್ವ ಸಾಧನೆ ಕುರಿತು ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ಹೆಚ್.ವಿ. ಸುರೇಶ್ ಅವರು ಮಾತನಾಡಿ, ಐಎಸ್ಒ ಪ್ರತಿನಿಧಿಗಳು ಆರಂಭದಲ್ಲಿ ನಮ್ಮನ್ನು ಸಂಪರ್ಕಿಸಿದಾಗ ನಾವು ಅಷ್ಟಾಗಿ ಗಮನ ಹರಿಸಿರಲಿಲ್ಲ. ಆದರೆ ಅವರು ಯಾರಿಗೂ ತಿಳಿಸದಂತೆ ಮಠಕ್ಕೆ ಭೇಟಿ ನೀಡಿ, ಗುರುವಾರದ ವಿಶೇಷ ಪೂಜೆ, ಭಕ್ತರೊಂದಿಗಿನ ಸಂವಹನ ಮತ್ತು ಸ್ವಚ್ಛತೆಯನ್ನು ಖುದ್ದಾಗಿ ಗಮನಿಸಿದ್ದಾರೆ. ಕೇವಲ ಎರಡು ತಿಂಗಳ ಹಿಂದೆಯಷ್ಟೇ ನಮಗೆ ಈ ಪ್ರಕ್ರಿಯೆಯ ಗಾಂಭೀರ್ಯತೆ ತಿಳಿಯಿತು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಕಳೆದ ವಾರ ನಮಗೆ ಪ್ರಮಾಣಪತ್ರಗಳು ಹಸ್ತಾಂತರವಾಗಿವೆ. ಈ ಗೌರವ ಸದ್ಭಕ್ತರ ಸೇವೆಗೆ ಸಂದ ಫಲ, ಎಂದು ಹರ್ಷ ವ್ಯಕ್ತಪಡಿಸಿದರು. ಸಮಿತಿಯ ಖಜಾಂಚಿ ಗುರುಪ್ರಸಾದ್ ಅವರು ಕೂಡ, ಮೌಲ್ಯಮಾಪಕರು ಯಾವುದೇ ಮುನ್ಸೂಚನೆ ನೀಡದೆ ಭೇಟಿ ನೀಡಿ ಮಠದ ನಿಷ್ಕಲ್ಮಶ ಸೇವೆಯನ್ನು ಗುರುತಿಸಿರುವುದಾಗಿ ಹೇಳಿದರು.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.