ಅಪರಿಚಿತರು ಮನೆಯಲ್ಲಿ ಕೂಡಿ ಹಾಕಿದ್ದಾರೆ ಅಂತ ಪೊಲೀಸರಿಗೆ ಬಂತು ದೂರು,ಆಮೇಲೆ?

ಹಂಚಿಕೊಳ್ಳಿ
WhatsApp Facebook X Telegram
Shivamogga
Shivamogga

Shimoga ಶಿವಮೊಗ್ಗ: ಅಪರಿಚಿತ ವ್ಯಕ್ತಿಗಳು ನಮ್ಮನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿ 112 ಪೊಲೀಸ್ ಸಿಬ್ಬಂದಿಗಳಿಗೆ ದೂರು ನೀಡಿರುವ ಘಟನೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ: ಮನೆಯ ಪ್ಯಾಸೇಜ್‌ನಲ್ಲಿ ಕಾಣಿಸಿಕೊಂಡ ಅಪರೂಪದ ಮರದ ಹಾವು ರಕ್ಷಣೆ

ಜುಲೈ 14ರಂದು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ ದೂರುದಾರರು 112ಗೆ ಕರೆ ಮಾಡಿದ್ದರು. ಯಾರೋ ಅಪರಿಚಿತ ವ್ಯಕ್ತಿಗಳು ತಮ್ಮನ್ನು ಮನೆಯ ಹೊರಗಿನಿಂದ ಮನೆಯೊಳಗೆ ಕೂಡಿಹಾಕಿ ಬೀಗ ಹಾಕಿದ್ದಾರೆ  ಎಂದು ಆರೋಪಿಸಿದ್ದರು.

ದೂರುದಾರರಿಂದ ತುರ್ತು ಕರೆ ಬಂದ ತಕ್ಷಣವೇ ಕಾರ್ಯಪ್ರವೃತ್ತರಾದ ಇಆರ್‌ವಿ ಪೊಲೀಸ್ ಸಿಬ್ಬಂದಿಗಳು ತಡಮಾಡದೆ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ತದನಂತರ ಪೊಲೀಸರು ಸ್ಥಳದಲ್ಲಿ ದೂರುದಾರರನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. 

ವಿಚಾರಣೆ ವೇಳೆ ದೂರುದಾರರು ನಮನೆಯಲ್ಲಿ ಬಾಡಿಗೆಗೆ ವಾಸವಾಗಿರುವುದು ತಿಳಿದುಬಂದಿದೆ. ಮನೆ ಖಾಲಿ ಮಾಡುವ ವಿಚಾರವಾಗಿ ಬಾಡಿಗೆದಾರರು ಹಾಗೂ ಮನೆ ಮಾಲೀಕರ ನಡುವೆ ಜಗಳ ನಡೆದಿತ್ತು. ಈ ಗಲಾಟೆಯ ಹಿನ್ನೆಲೆಯಲ್ಲೇ ಪರಸ್ಪರ ವಿರೋಧ ವ್ಯಕ್ತಪಡಿಸಿ ಹೊರಗಿನಿಂದ ಕೊಠಡಿಗೆ ಬೀಗ ಹಾಕಲಾಗಿತ್ತು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor