ಶಿವಮೊಗ್ಗ: ಮನೆಯ ಪ್ಯಾಸೇಜ್‌ನಲ್ಲಿ ಕಾಣಿಸಿಕೊಂಡ ಅಪರೂಪದ ಮರದ ಹಾವು ರಕ್ಷಣೆ

ಹಂಚಿಕೊಳ್ಳಿ
WhatsApp Facebook X Telegram
Bronzeback Tree Snake
Bronzeback Tree Snake

Bronzeback Tree Snake ಶಿವಮೊಗ್ಗ: ನಗರದ ವಿನೋಬಾನಗರದ ಮನೆಯೊಂದರಲ್ಲಿ ಅಪರೂಪದ ಮರದ ಹಾವು ಕಾಣಿಸಿಕೊಂಡಿದ್ದು, ಅದನ್ನು ಉರಗ ತಜ್ಞ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಶಿವಮೊಗ್ಗ: ಜೈಲ್ ಸರ್ಕಲ್ ಬಳಿ ಫುಟ್‌ಪಾತ್ ಒತ್ತುವರಿ: ಜಾಹೀರಾತು ಫಲಕಗಳೇ ಸಾರ್ವಜನಿಕರಿಗೆ ತಲೆನೋವು

ವಿನೋಬಾನಗರದ ಸಮೃದ್ಧಿ ನಿಲಯ ಎಂಬ ಮನೆಯ ಪ್ಯಾಸೇಜ್‌ನಲ್ಲಿ ಈ ಅಪರೂಪದ ಮರದ ಹಾವು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಉರಗ ರಕ್ಷಕರಾದ ಸ್ನೇಕ್ ಕಿರಣ್ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು, ಜಾಗರೂಕತೆಯಿಂದ ಸುಮಾರು 45 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹಾವಿನ ಬಗ್ಗೆ ಮಾಹಿತಿ ನೀಡಿದ ಅವರು, ಇದು ಅತ್ಯಂತ ಅಪರೂಪದ ವಿಷರಹಿತ ಹಾವಾಗಿದೆ. ಇದನ್ನು ಕಂಚು ಬೆನ್ನಿನ ಮರದ ಹಾವು ಎಂದು ಕರೆಯಲಾಗುತ್ತದೆ. ಸುಮಾರು 4.5 ಅಡಿ ಉದ್ದ ಇರುವ ಈ ಹಾವುಗಳು ಸಾಮಾನ್ಯವಾಗಿ ಮರಗಳ ಮೇಲೆ ವಾಸಿಸುತ್ತವೆ, ಎಂದು ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor