ಶಿವಮೊಗ್ಗ: ಸಿಟಿ ಬಸ್‌ಗಳಲ್ಲಿ ಕಿರಿಕಿರಿ ಉಂಟಾಗುತ್ತಿದೆಯೇ? ಈ ನಂಬರ್‌ಗೆ ಕಾಲ್ ಮಾಡಿ

ಹಂಚಿಕೊಳ್ಳಿ
WhatsApp Facebook X Telegram
Shivamogga City Bus Passenger Safety Helpline
Shivamogga City Bus Passenger Safety Helpline

Shivamogga City Bus ಶಿವಮೊಗ್ಗ: ನಗರದ ಸಿಟಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗ ಸಂಚಾರ ಪೊಲೀಸರು ಅನೇಕ ಕ್ರಮಗಳನ್ನು ಕೈಗೊಂಡಿದ್ದಾರೆ. ಈ ಸಂಬಂಧ ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಎಲ್ಲಾ ಸಿಟಿ ಬಸ್ ಮಾಲೀಕರು, ಚಾಲಕರು ಹಾಗೂ ನಿರ್ವಾಹಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಶಿವಮೊಗ್ಗ: ಸ್ವಂತ ಮಗ, ಸ್ನೇಹಿತರಿಂದಲೇ ಮನೆಯಲ್ಲಿ ಕಳ್ಳತನ? ಪೊಲೀಸರಿಗೆ ದೂರು ನೀಡಿದ ತಂದೆ!

ಈ ಸಂದರ್ಭದಲ್ಲಿ ಚಾಲಕರು ಹಾಗೂ ಮಾಲೀಕರಿಗೆ ಅನೇಕ ಸೂಚನೆಗಳನ್ನು ನೀಡಲಾಯಿತು. ಅದೇ ರೀತಿ ಪ್ರಯಾಣಿಕರಿಗೂ ಸಹ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅದೇನೆಂದರೆ, ಸಿಟಿ ಬಸ್‌ನಲ್ಲಿ ಪ್ರಯಾಣಿಸುವಾಗ ಯಾವುದೇ ಅಸಭ್ಯ ವರ್ತನೆ ತೋರಿದರೆ, ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದರೆ, ಜೋರಾಗಿ ಅಸಭ್ಯ ಹಾಡುಗಳನ್ನು ಪ್ರಸಾರ ಮಾಡಿದರೆ ಅಥವಾ ಪ್ರಯಾಣಿಕರಿಗೆ ತೊಂದರೆ ಉಂಟಾದರೆ ಮೌನವಾಗಿರಬೇಡಿ. ಕೂಡಲೇ ಪೊಲೀಸ್ ಸಹಾಯಕ್ಕಾಗಿ ಕರೆ ಮಾಡಿ ಎಂದು ತಿಳಿಸಿದರು. ಹಾಗೆಯೇ ಪಬ್ಲಿಕ್ ಐ ಆ್ಯಪ್, 112 ಹಾಗೂ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರನ್ನು ನನಿಡುವಂತೆ ಮನವಿ ಮಾಡಿದರು.

ಸಿಟಿ ಬಸ್‌ನಲ್ಲಿ ತೊಂದರೆಯಾದರೆ ಯಾವ ರೀತಿ ದೂರು ನೀಡಬೇಕು ಎಂಬುದರ ಜಾಗೃತಿ ಪೋಸ್ಟರ್ ಅನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಅಷ್ಟೇ ಅಲ್ಲದೆ, ಅದನ್ನು ಅನೇಕ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಕಾಣಿಸುವ ಹಾಗೆ ಅಂಟಿಸಲಾಯಿತು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor