ಶಿವಮೊಗ್ಗ : ಟ್ರಾಫಿಕ್​ ಡಿಸ್ಕೌಂಟ್​​​ಗೆ ಭರ್ಜರಿ ರೆಸ್ಪಾನ್ಸ್​​, 20 ದಿನದಲ್ಲಿ ಕೊಟ್ಯಾಂತರ ರೂಪಾಯಿ ದಂಡ ಸಂಗ್ರಹ.

ಹಂಚಿಕೊಳ್ಳಿ
WhatsApp Facebook X Telegram
Shivamogga Traffic Fine 1.27 Crore Collected
Shivamogga Traffic Fine 1.27 Crore Collected

Shivamogga Traffic Fine ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಇ-ಚಲನ್ ದಂಡದ ಮೊತ್ತಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ ಶೇಕಡಾ 50 ರಷ್ಟು ರಿಯಾಯಿತಿಗೆ ಶಿವಮೊಗ್ಗ ಜಿಲ್ಲಾದ್ಯಂತ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರದ ಈ ಕೊಡುಗೆಗೆ ಪೂರಕವಾಗಿ ಕಳೆದ ಕೇವಲ 20 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 1,27,95,250 ರೂಪಾಯಿ ದಂಡದ ಹಣ ಸಂಗ್ರಹವಾಗಿದೆ.

ಜೋಗ ಜಲಪಾತ, ಟ್ರೆಕ್ಕಿಂಗ್ ಹೋಗೋ ಪ್ಲಾನ್ ಇದೆಯಾ? ಶಿವಮೊಗ್ಗ ಜಿಲ್ಲಾಧಿಕಾರಿಗಳ ಈ ಆದೇಶವನ್ನೊಮ್ಮೆ ಓದಿ

ರಾಜ್ಯ ಸರ್ಕಾರವು ಜೂನ್ 21 ರಿಂದ ಜುಲೈ 10 ರವರೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಉಳಿದಿದ್ದ ಇ-ಚಲನ್ ದಂಡದ ಮೊತ್ತಕ್ಕೆ ಶೇ. 50 ರಷ್ಟು ರಿಯಾಯಿತಿ ನೀಡಿತ್ತು. ಇದರ ಸದುಪಯೋಗ ಪಡೆದುಕೊಳ್ಳಲು ವಾಹನ ಸವಾರರು ಮುಗಿಬಿದ್ದಿದ್ದು, ಈ ನಿಗದಿತ ಅವಧಿಯಲ್ಲಿ ಒಟ್ಟು 30,218 ಇ-ಚಲನ್ ಪ್ರಕರಣಗಳನ್ನು ಇತ್ಯರ್ಥಪಡಿಸಿ 1,27,95,250 ದಂಡದ ಮೊತ್ತವನ್ನು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ್ದಾರೆ.

ಈ ವಿಶೇಷ ಅಭಿಯಾನಕ್ಕೆ ಅತ್ಯುತ್ತಮವಾಗಿ ಸ್ಪಂದಿಸಿ ಸಹಕರಿಸಿದ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor