ಕರಾವಳಿ ಕಾಂಟ್ರವರ್ಸಿ: ಸಂಭಾವನೆ ವಿವಾದಕ್ಕೆ ಕಾರಣವಾಯ್ತಾ ಸಿಕ್ಸ್​ ಪ್ಯಾಕ್​ : ಡೈರೆಕ್ಟರ್​ ಹೇಳಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Karavali Remuneration Row Director Clarifies
Karavali Remuneration Row Director Clarifies

ಶಿವಮೊಗ್ಗ : ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಭಾರಿ ಕುತೂಹಲ ಮೂಡಿಸಿರುವ ಕರಾವಳಿ ಸಿನಿಮಾ ಜುಲೈ 24 ರಂದು ತೆರೆಕಾಣಲು ಸಜ್ಜಾಗಿದೆ. ಜುಲೈ 7 ರಂದು ಬಿಡುಗಡೆಯಾದ ಚಿತ್ರದ ಟ್ರೈಲರ್‌ಗೆ ನೆಟ್ಟಿಗರಿಂದ ಹಾಗೂ ಸಿನಿಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಿನಿಮಾ ಸೂಪರ್ ಹಿಟ್ ಆಗುವ ಮುನ್ಸೂಚನೆ ಸಿಕ್ಕಿದೆ. ಆದರೆ, ಕಪಾಲಿ ಚಿತ್ರಮಂದಿರದಲ್ಲಿ ನಡೆದ ಟ್ರೈಲರ್ ಲಾಂಚ್ ಇವೆಂಟ್ ವೇಳೆ ಶುರುವಾದ ಡಬ್ಬಿಂಗ್ ವಿವಾದ ಮಾತ್ರ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಇದೀಗ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 

ಶಿವಮೊಗ್ಗ ಕುಡಿಯುವ ನೀರು ವ್ಯತ್ಯಯ: ನ್ಯೂ ಮಂಡ್ಲಿ ಪಂಪ್ ಹೌಸ್‌ಗೆ ಶಾಸಕ ಚನ್ನಬಸಪ್ಪ ದಿಢೀರ್ ಭೇಟಿ, 

Karavali Remuneration Row ಅಂದು ಕಪಾಲಿ ಚಿತ್ರಮಂದಿರದ ಇವೆಂಟ್‌ನಲ್ಲಿ ನಡೆದಿದ್ದೇನು

ಕಪಾಲಿ ಚಿತ್ರಮಂದಿರದಲ್ಲಿ ಕರಾವಳಿ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ, ಅಲ್ಲಿ ನೆರೆದಿದ್ದ ಅಭಿಮಾನಿಗಳು ಟ್ರೈಲರ್‌ನಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಸ್ವಂತ ಧ್ವನಿ ಇಲ್ಲದಿರುವುದನ್ನು ಗಮನಿಸಿ ಜಗಳ ಆರಂಭಿಸಿದ್ದರು. ಪ್ರಜ್ವಲ್ ಧ್ವನಿ ಬದಲಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಮಾಧ್ಯಮಗಳ ಎದುರು ಬಂದಿದ್ದ ನಿರ್ದೇಶಕ ಗುರುದತ್ ಗಾಣಿಗೆ, ಪ್ರಜ್ವಲ್ ಅವರಿಗೆ 1.25 ಕೋಟಿ ರೂ. ಸಂಭಾವನೆ ಮಾತನಾಡಲಾಗಿತ್ತು, ಈಗಾಗಲೇ 1 ಕೋಟಿ ನೀಡಲಾಗಿದೆ. ಬಾಕಿ 25 ಲಕ್ಷವನ್ನು ಡಬ್ಬಿಂಗ್ ಮುಗಿದ ನಂತರ ನೀಡುವುದಾಗಿ ಹೇಳಿದ್ದೆವು. ಆದರೆ ಅವರು ಬಿಡುವಿಲ್ಲದ ಕಾರಣ ನೀಡಿ ಡಬ್ಬಿಂಗ್‌ಗೆ ಬರಲಿಲ್ಲ, ಅನಿವಾರ್ಯವಾಗಿ ಬೇರೆಯವರಿಂದ ಧ್ವನಿ ಕೊಡಿಸಿದ್ದೇವೆ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಪ್ರಜ್ವಲ್ ದೇವರಾಜ್, ನನಗೆ ಕೊಡಬೇಕಿದ್ದ ಸಂಭಾವನೆಯನ್ನು ಬಾಕಿ ಉಳಿಸಿಕೊಂಡಿದ್ದರು. ನಾನು ಈಗಾಗಲೇ ಸಾಕಷ್ಟು ಸಂಭಾವನೆ ಬಿಟ್ಟುಕೊಟ್ಟಿದ್ದೇನೆ, ಇನ್ನು ಬಿಡಲು ಸಾಧ್ಯವಿಲ್ಲ. ಪೂರ್ತಿ ಹಣ ಕೊಟ್ಟ ಮೇಲಷ್ಟೇ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದೆ. ಆದರೆ ನನಗೆ ತಿಳಿಸದೆಯೇ ಬೇರೆಯವರಿಂದ ಡಬ್ಬಿಂಗ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದರು. ಈ ವಿವಾದ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಅಷ್ಟೇ ಅಲ್ಲದೆ ಚಿತ್ರರಂಗದ ಅನೇಕ ನಟಿಯರು ಪ್ರಜ್ವಲ್​ ಪರ ಬ್ಯಾಟ್​ ಬೀಸಿದ್ದರು.  

Karavali Remuneration Row ಸಿಕ್ಸ್ ಪ್ಯಾಕ್ ಮಾಡದಿದ್ದದ್ದೇ ಸಂಭಾವನೆ ಕಡಿತಕ್ಕೆ ಕಾರಣವಾಯ್ತಾ? ನಿರ್ದೇಶಕರು ನೀಡಿದ ಸ್ಪಷ್ಟನೆ ಇಲ್ಲಿದೆ

ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ನಿರ್ದೇಶಕ ಗುರುದತ್ ಗಾಣಿಗ ಮತ್ತು ಕರಾವಳಿ ಚಿತ್ರತಂಡ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿವಾದದ ಅಸಲಿ ಕಾರಣ ಸಿಕ್ಸ್ ಪ್ಯಾಕ್ (ದೈಹಿಕ ರೂಪಾಂತರ) ಎಂದು ಸ್ಪಷ್ಟಪಡಿಸಿದೆ. 

 ಚಿತ್ರತಂಡದ ಪ್ರಕಟಣೆಯನ್ನು ನೋಡುವುದಾದರೆ ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಅನಧಿಕೃತವಾಗಿ ನುಗ್ಗಿ ಅಡ್ಡಿಪಡಿಸಲು ಯತ್ನಿಸಿದ ಅಪರಿಚಿತರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ನಟ ಪ್ರಜ್ವಲ್ ದೇವರಾಜ್ ಅವರಿಗೆ ನೀಡಬೇಕಿದ್ದ ಬಾಕಿ ಹಣವನ್ನು ಘಟನೆ ನಡೆದ ಮರುದಿನವೇ ಪಾವತಿಸಲಾಗಿದೆ. ಸಿನಿಮಾದ ಕಥೆಗೆ ಪ್ರಜ್ವಲ್ ದೇವರಾಜ್ ಅವರ ದೈಹಿಕ ರೂಪಾಂತರ (Physical Transformation/6 packs) ಬಹುಮುಖ್ಯವಾಗಿತ್ತು. ಅದಕ್ಕಾಗಿಯೇ ಅಷ್ಟು ದೊಡ್ಡ ಮೊತ್ತದ ಸಂಭಾವನೆ ಒಪ್ಪಿಕೊಳ್ಳಲಾಗಿತ್ತು. ಆದರೆ, ಅವರು ದೈಹಿಕ ರೂಪಾಂತರ ಮಾಡಿಕೊಳ್ಳದ ಕಾರಣ ಉಳಿದ ಹಣವನ್ನು ಬಾಕಿ ಇರಿಸಲಾಗಿತ್ತು.

ಹಣ ನೀಡದ ಹೊರತು ಡಬ್ಬಿಂಗ್ ಮಾಡಲ್ಲ ಎಂದು ಪ್ರಜ್ವಲ್ ಪಟ್ಟು ಹಿಡಿದಾಗ, ಅವರಿಗಾಗಿ 2 ತಿಂಗಳು ಕಾಯಲಾಗಿತ್ತು. ಸುಪ್ರೀತ್, ಜಾಕ್ ಮಂಜು, ಲೋಹಿತ್ ಅವರಂತಹ ಸ್ಟಾರ್ ನಿರ್ಮಾಪಕರು ಮಧ್ಯಸ್ಥಿಕೆಗೆ ಯತ್ನಿಸಿದರೂ ಪ್ರಜ್ವಲ್ ಒಪ್ಪಲಿಲ್ಲ. ಟ್ರೈಲರ್‌ನಲ್ಲಿ ತಮ್ಮ ಧ್ವನಿ ಇರುವುದಿಲ್ಲ ಎಂಬ ವಿಷಯ ಪ್ರಜ್ವಲ್ ಅವರಿಗೆ ಮೊದಲೇ ತಿಳಿದಿತ್ತು ಹಾಗೂ ಅವರ ಮ್ಯಾನೇಜರ್ ಮೂಲಕವೂ ಮಾಹಿತಿ ನೀಡಲಾಗಿತ್ತು. ಈಗ ಬಾಕಿ ಹಣ ಸಂದಾಯವಾದ ಮೇಲೂ ಸಾಮಾಜಿಕ ಜಾಲತಾಣಗಳ ಅಪರಿಚಿತ ಖಾತೆಗಳಿಂದ ಚಿತ್ರದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗುತ್ತಿದ್ದು, ಅಂಥವರ ವಿರುದ್ಧ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor