ಒಂದೆ ದಿನ ಸಿಟಿಯಲ್ಲಿ ಪೊಲೀಸರ ಡಬ್ಬಲ್ ಆಕ್ಷನ್! 3 ಬಸ್ ಸೀಜ್, ವಾಹನಗಳಿಗೆ ನೋಟಿಸ್!

ಹಂಚಿಕೊಳ್ಳಿ
WhatsApp Facebook X Telegram
Shivamogga Police Action Against Abandoned Vehicles and Drunk City Bus Drivers

Shivamogga Police Action / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರ ಟ್ರಾಫಿಕ್ ಪೊಲೀಸರು ಒಟ್ಟೊಟ್ಟಿರಗೆ ಎರಡು ಡ್ರೈವ್ಗಳನ್ನು ಮೂವ್ ಮಾಡಿದ್ದಾರೆ. ಒಂದು ಕಡೆ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿರುವ ಹಳೆಯ ವೆಹಿಕಲ್​ಗಳ ವಿಲೇವಾರಿಗೆ ಮುಂದಾಗಿದ್ದಾರೆ. ಇನ್ನೊಂದು ಕಡೆ ನಗರ ಸಾರಿಗೆ ಬಸ್​ಗಳಲ್ಲಿ ನಿಯಮ ಉಲ್ಲಂಘಟನೆಯನ್ನು ಪತ್ತೆ ಮಾಡುವ ಅಭಿಯಾನ ಆರಂಭಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರ ನೇತೃತ್ವದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ನಗರದ ವಿವಿಧ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಬಿಟ್ಟುಹೋಗಿರುವ ವಾಹನಗಳ ಮೇಲೆ ಎಸ್​ಪಿ ಖುದ್ದಾಗಿ ನೋಟಿಸ್ ಅಂಟಿಸಿ, ವಾರ್ನಿಂಗ್​ ಸಹ ನೀಡಿದ್ದಾರೆ.

ಇನ್ನು ನಿನ್ನೆ ದಿನ ಜುಲೈ 15, 2026ರಂದು ನಗರದಾದ್ಯಂತ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಟ್ರಾಫಿಕ್​ ಪೊಲೀಸರು ಹಠಾತ್ ಪರಿಶೀಲನೆ ನಡೆಸಿದ್ರು. ಸುಮಾರು 40 ಸಿಟಿ ಬಸ್‌ಗಳನ್ನು ತಡೆದು ಪರಿಶೀಲನೆಗೆ ಒಳಪಡಿಸಿದರು.

ಈ ವೇಳೆ 03 ಬಸ್ ಚಾಲಕರು ಮದ್ಯಪಾನ ಮಾಡಿರುವುದು ಗೊತ್ತಾಗಿದೆ. ಆಕ್ಷನ್​ನ ಭಾಗವಾಗಿ ಆ ಬಸ್​ಗಳನ್ನ ವಶಕ್ಕೆ ಪಡೆದ ಪೊಲೀಸರು, ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆ ಅನ್ವಯ ಕೇಸ್​ ಮಾಡಿದ್ದಾರೆ. ಅಲ್ಲದೆ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತು ಮಾಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.

ಈ ಕಾರ್ಯಾಚರಣೆಗೆ ಪೂರಕವಾಗಿ ಜನರು ಸಹ ಪೊಲೀಸರಿಗೆ ಕೈಜೋಡಿಸಬಹುದಾಗಿದೆ. ರಸ್ತೆಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನಕ್ಕೆ ತರಲು ಪಬ್ಲಿಕ್ ಐ ವಾಟ್ಸಾಪ್ ಸಂಖ್ಯೆ 8277982900 ಹಾಗೂ ಶಿವಮೊಗ್ಗ ಸಂಚಾರ ಪೊಲೀಸ್ ಸಹಾಯವಾಣಿ ವಾಟ್ಸಾಪ್ ಸಂಖ್ಯೆ 8277983404 ಅನ್ನು ಬಳಸಬಹುದಾಗಿದೆ. ಅಲ್ಲದೆ ಕಣ್ಣೆದುರೇ ಕಾಣುವ ಅಪರಾಧ ಕೃತ್ಯ, ಗಾಂಜಾ ವ್ಯಸನಿಗಳ ಮಾಹಿತಿ, ಸಿಟಿ ಬಸ್​ಗಳಲ್ಲಿ ನಿಯಮ ಉಲ್ಲಂಘನೆ, ಟ್ರಾಫಿನ್​ನಲ್ಲಿ ವಾಹನ ಸವಾರರ ಅನುಚಿತ ವರ್ತನೆ ಸೇರಿದಂತೆ ಯಾವುದೇ ಕಾನೂನು ಬಾಹಿರ ಕೃತ್ಯಗಳನ್ನು ಜನರು ಪಬ್ಲಿಕ್ ಐ ಮೂಲಕ ಪೊಲೀಸರಿಗೆ ಪೋಟೋ ಸಮೇತ ನೀಡಬಹುದು. ಇಲ್ಲಿ ಮಾಹಿತಿ ಗೌಪ್ಯವಾಗಿರಲಿದೆ ಅಂತಾ ಎಸ್​ಪಿ ನಿಖಿಲ್ ಬಿ ತಿಳಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor