Voter List Revision / ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಭದ್ರಾವತಿ ಪಟ್ಟಣ್ಣದ ಹಳೇನಗರದಲ್ಲಿ ಎಸ್‌ಐಆರ್ ಪರಿಷ್ಕರಣೆಗೆ ಹೋಗಿದ್ದ ಅಧಿಕಾರಿಯೊಬ್ಬರ ಮೇಲೆ ನಾಯಿಯೊಂದು ಅಟ್ಯಾಕ್ ಮಾಡಿದೆ. ಇಲ್ಲಿ ಖಾಜಿಮೊಹಲ್ಲಾ-ಕೋಟೆ ಏರಿಯಾ ಭಾಗದಲ್ಲಿ ಘಟನೆ ನಡೆದಿದೆ.
ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮತಗಟ್ಟೆ ಅಧಿಕಾರಿ ರಹಮತುಲ್ಲಾ ಎಂಬವರು, ಇಲ್ಲಿನ ನಗರಸಭೆ 5ನೇ ವಾರ್ಡಿನ ಖಾಜಿ ಮೊಹಲ್ಲಾ-ಕೋಟೆ ಏರಿಯಾ 3ನೇ ತಿರುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈ ವೇಳೆ ಅಲ್ಲಿದ್ದ ಮನೆಯೊಂದರ ನಾಯಿ, ರಹಮತುಲ್ಲಾ ಅವರ ಕಾಲಿಗೆ ನಾಯಿ ಕಚ್ಚಿದೆ. ಘಟನೆಯಲ್ಲಿ ರಹಮತ್ತುಲ್ಲಾ ರವರ ಕಾಲಿನಿಂದ ರಕ್ತ ಇಳಿದಿದೆ. ತಕ್ಷಣ ಅವರು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಇತ್ತ ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಉಪತಹಸೀಲ್ದಾರ್ ಮಂಜಾ ನಾಯ್ಕರವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಅಲ್ಲದೆ ಸಾರ್ವಜನಿಕರು ಇತರರ ಮೇಲೆ ದಾಳಿ ಮಾಡುವ ತಮ್ಮ ಸಾಕು ನಾಯಿಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
