ತೀರ್ಥಹಳ್ಳಿಯಲ್ಲಿ ಎರಡು ದುರಂತ ಸಾವು! ಉಡುಪಿಯ ನೃತ್ಯಶಿಕ್ಷಕ ನೇಣಿಗೆ ಶರಣು, ಕೆರೆಯಲ್ಲಿ ಕೂಲಿಕಾರ್ಮಿಕ ದುರ್ಮರಣ

ಹಂಚಿಕೊಳ್ಳಿ
WhatsApp Facebook X Telegram
Two Tragic Incidents in Thirthahalli
Two Tragic Incidents in Thirthahalli

Two Tragic Incidents in Thirthahalli / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತೀರ್ಥಹಳ್ಳಿಯಲ್ಲಿ ನಿನ್ನೆ ದಿನ ಎರಡು ದುರ್ಘಟನೆ ವರದಿಯಾಗಿದೆ. ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಸೀಬಿನಕೆರೆ ನಿವಾಸಿಯೊಬ್ಬರು ನೇಣಿಗೆ ಕೊರಳೊಡ್ಡಿದ್ದರೆ, ಮತ್ತೊಂದೆಡೆ ಟೆಂಕಬೈಲು ಸಮೀಪದ ತುಂಬುಕೋಡುವಿನಲ್ಲಿ ಕೃಷಿ ಕಾರ್ಮಿಕರೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.

ತೀರ್ಥಹಳ್ಳಿಯಲ್ಲಿ ಯಾವಾಗಲೂ ನವರಾತ್ರಿ ಟೈಮಲ್ಲಿ ಹುಲಿವೇಷ ಹಾಕುತ್ತಿದ್ದ ಯುವ ಕಲಾವಿದ, ಸೀಬಿನಕೆರೆ ನಿವಾಸಿ ರಾಕೇಶ್ (29) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಡುಪಿಯಲ್ಲಿ ನೃತ್ಯ ಶಿಕ್ಷಕರಾಗಿ ಕೆಲಸ ಮಾಡ್ತಿದ್ದ ರಾಕೇಶ್​ ಕಳೆದ ಮೂರ್ನಾಲ್ಕು ವರ್ಷಗಳಿಂದ ನವರಾತ್ರಿಯಲ್ಲಿ ಹುಲಿವೇಷ ಹಾಕಿ ಪಿಲಿ ನೃತ್ಯ ಮಾಡುತ್ತಿದ್ದರು.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ರಾಕೇಶ್ ನೇಣಿಗೆ ಕೊರಳೊಡ್ಡಿದ್ದಾರೆ. ಅವರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ಸಿಬ್ಬಂದಿ ಸ್ಥಳಮಹಜರ್ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಮಾಡುತ್ತಿದ್ದಾರೆ.

ಕೆರೆಗೆ ಬಿದ್ದು ಸಾವು

ಮತ್ತೊಂದು ಘಟನೆಯಲ್ಲಿ, ಜಮೀನಿನಲ್ಲಿರುವ ಕೆರೆಯಲ್ಲಿದ್ದ ಮೋಟಾರ್ ಪಂಪ್ ಮೇಲೆತ್ತುವ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಟೆಂಕಬೈಲು ಗ್ರಾಮದ ತುಂಬುಕೋಡುವಿನ ಉಮೇಶ್ (43) ಮೃತಪಟ್ಟವರು. ಕೊಪ್ಪದವರಾದ ಇವರು, ತೋಟದ ಕೆಲಸಕ್ಕೆ ಅಂತಾ ಇಲ್ಲಿಗೆ ಬಂದಿದ್ದರು. ಈಜಲು ಬರುತ್ತಿರಲಿಲ್ಲವಾದ ಕಾರಣ ನೀರಿನಿಂದ ಮೇಲಕ್ಕೆ ಬರಲಾಗದೇ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor