ಸಿಗಂದೂರು ಭಕ್ತರಿಗೆ ಗುಡ್​ ನ್ಯೂಸ್! ಮತ್ತೆ ಆರಂಭವಾಯ್ತು ಹಲ್ಕೆ-ಮುಪ್ಪಾನೆ ಲಾಂಚ್ !

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS 

ಈ ಮೊದಲು ನೀರಿನ ಪ್ರಮಾಣ ತಗ್ಗಿದ್ದರಿಂದ ನಿಂತಿದ್ದ ಹಲ್ಕೆ ಮುಪ್ಪಾನೆ ಲಾಂಚ್​ ಆನಂತರ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಪುನರಾರಂಭಗೊಂಡಿದೆ. 

ಹಲ್ಕೆ-ಮುಪ್ಪಾನೆ ಲಾಂಚ್ ಸೇವೆ  ಭಾನುವಾರದಿಂದ ಆರಂಭಗೊಂಡಿದೆ. ಕಳೆದ  ಆಗಸ್ಟ್​  25ರಂದು  ಲಾಂಚ್  ಸ್ಥಗಿತಗೊಂಡಿತ್ತು. ಇದರಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ  (Sigandur to Choudeshwari Temple) ಗೆ ಹೋಗುವ ಭಕ್ತರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಅಲ್ಲದೆ ಸುತ್ತಮುತ್ತಲಿನ ದ್ವೀಪದ ಜನರಿಗೆ ಸಂಚಾರಕ್ಕೆ ಸಮಸ್ಯೆಯಾಗಿತ್ತು. 

ಇದೀಗ ಲಾಂಚ್ ದುರಸ್ತಿ ಕಂಡಿದೆ. ಹೀಗಾಗಿ ಸಂಚಾರ ಮತ್ತೆ ಆರಂಭವಾಗಿದೆ. ಈ ಬಗ್ಗೆ ಕಡವು ನಿರೀಕ್ಷಕ ಧನೇಂದ್ರಕುಮಾರ್  ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಳು 


 

 

Leave a Comment