ಶಿವಮೊಗ್ಗದಲ್ಲಿ ಕೊಪ್ಪಳದ ಯುವಕ ಅರೆಸ್ಟ್! ದೊಡ್ಡಪೇಟೆ ಪೊಲೀಸರಿಗೆ ಸಿಗದ ಯುವತಿ! ಏನಿದು ಪ್ರಕರಣ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆಯ ಅಪರಾಧ  ಜಗತ್ತಿನಲ್ಲಿ ಚಿತ್ರವಿಚಿತ್ರ ಕೇಸ್​ಗಳು ಆಗಾಗ ದಾಖಲಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಇದೀಗ ಚಿನ್ನದಂಗಡಿಯಲ್ಲಿಯೇ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದ್ದುಕೊಂಡ ಹೋಗಿದ್ದ ಐನಾತಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಏನಿದು ಪ್ರಕರಣ

ಶಿವಮೊಗ್ಗದ ಗಾಂಧಿಬಜಾರ್​ನಲ್ಲಿ ನಡೆದ ಘಟನೆಯಿದು, ಇಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಮೊದಲ ಸಲ ಬಂದಿದ್ದ ವೇಳೆ, ಸುಮಾರು 11,500 ರೂ. ಮೌಲ್ಯದ ಚಿನ್ನಾಭರಣ ಖರೀದಿಸಿದ್ದರು. ಹೀಗೆ ನಂಬಿಕೆ ಮೂಡುವಂತೆ ಮಾಡಿ ಎರಡನೇ ಸಲ ಬಂದ ಇಬ್ಬರು ಒಡವೆಗಳನ್ನು ಖರೀದಿಸುವ ನೆಪದಲ್ಲಿ ಹಲವು ಆಭರಣಗಳನ್ನು ಪರೀಕ್ಷಿಸಿದ್ದಾರೆ. ಅಂಗಡಿ ವ್ಯಾಪಾರಕ್ಕಿದ್ದ ಹುಡುಗನ ಗಮನ ಬೇರೆಡೆ ಸೆಳೆದು ನಕಲಿ ಬಂಗಾರವಿಟ್ಟು 85,900 ರೂ. ಮೌಲ್ಯದ 17 ಗ್ರಾಂ ಅಸಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

ನಡೆದ ಕಳ್ಳತನದ ಬಗ್ಗೆ ಅಂಗಡಿಯವರಿಗೆ ತಡವಾಗಿ ಮಾಹಿತಿಗೊತ್ತಾಗಿ ಪೊಲೀಸರ ಮೊರೆಹೋಗಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು, ಇದೀಗ ಕೊಪ್ಪಳ ಮೂಲದ ಮೆಹಬೂಬ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬಳು ಇನ್ನೂ ಸಹ ಪತ್ತೆಯಾಗಿಲ್ಲ.  


   

ಇನ್ನಷ್ಟು ಸುದ್ದಿಗಳು 


 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor