ಸಿಕ್ಕಿಬಿದ್ದ ಶ್ರೀಗಂಧ ಕಳ್ಳರು/ ಶಿವಮೊಗ್ಗದಲ್ಲಿ 61 ಮಂದಿ ವಿರುದ್ಧ ಕೇಸ್/ ಎತ್ತಿನ ನೊಗ ಬಡಿದು ಯುವಕ ಮರಣ/ ಮಾರಕಾಸ್ತ್ರ ಹಿಡಿದು ಹೆದರಿಸ್ತಿದ್ದವನಿಗೆ ಏನಾಯ್ತು ಗೊತ್ತಾ! TODAY @NEWS

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS 

ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರ ಬಂಧನ

ಶಿವಮೊಗ್ಗ ಅರಣ್ಯ ವೃತ್ತದ ವ್ಯಾಪ್ತಿಗೆ ಒಳಪಡುವ  ಲಕ್ಕವಳ್ಳಿ ವಲಯದಲ್ಲಿ  ಜೋಡಿ ಕೋಡಿಹಳ್ಳಿ ಗ್ರಾಮದ ಬಳಿ ಶ್ರೀಗಂಧ ಸಾಗಿಸುತ್ತಿದ್ದವರನ್ನ ಬಂಧಿಸಲಾಗಿದೆ. ಭದ್ರಾ ಮುಖ್ಯ ನಾಲೆಯ ದಂಡೆ ಮೇಲೆ ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ  ಕರಕುಚ್ಚಿ ಗ್ರಾಮದ ರಾಮು, ಇಲಿಯಾಜ್ ಬಂಧಿತರು. ಬಂಧಿತರಿಂದ 12.1 ಕೆಜಿ ಶ್ರೀಗಂಧದ ಚಕ್ಕೆಗಳು, ಬೈಕ್ ಅನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

61 ಜನರ ವಿರುದ್ಧ ಕೇಸ್ 

ಶಿವಮೊಗ್ಗ ಪೊಲೀಸರು ಏರಿಯಾ ಡಾಮಿನೇಷನ್​ ಗಸ್ತನ್ನು ಮತ್ತಷ್ಟು ಚುರುಕುಗೊಳಿಸಿದ್ದು, ನಿನ್ನೆ ಕೂಡ ಈ ಪ್ರಕಾರದಲ್ಲಿ ಬರೋಬ್ಬರಿ 61 ಮಂದಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ನ್ಯೂ ಮಂಡಳಿ, ಆರ್ ಎಂ ಎಲ್ ನಗರ, ಪದ್ಮ ಟಾಕೀಸ್ ಏರಿಯಾ, ಟಿಪ್ಪು ನಗರ ಚಾನೆಲ್ ಏರಿಯಾ, ಶೇಷಾದ್ರಿಪುರಂ, ಸಂಗೊಳ್ಳಿ ರಾಯಣ್ಣ ವೃತ್ತ, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಗುರುಪುರ ಪುರ್ಲೆ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಏರಿಯಾ,  ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸಿದ್ದಾಪುರ ಬೈಪಾಸ್, ಹಿರಿಯೂರು, ಹೊಳೆ ಹೊನ್ನೂರಿನ ನೃಪತುಂಗ ಸರ್ಕಲ್, ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ಜನ್ನತ್ ಗಲ್ಲಿ, ಜೋಗದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು  Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 61 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಮತ್ತು IMV ಕಾಯ್ದೆ ಅಡಿಯಲ್ಲಿ 11 ಪ್ರಕರಣಗಳುನ್ನು ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 

ಎತ್ತಿನಗಾಡಿ ನೊಗ ಬಡಿದು ಯುವಕ ಸಾವು!

ಅತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎತ್ತಿನಗಾಢಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ  ಎತ್ತಿನಗಾಡಿಯ ನೊಗ ಬಡಿದು ಸಾವನ್ನಪ್ಪಿದ ಘಟನೆ ನಡೆದಿದೆ. ಅಜ್ಜಂಪುರದಲ್ಲಿ ಈ ಘಟನೆ ನಡೆದಿದ್ದು 25 ವರ್ಷದ ಭರತ್ ಮೃತ ಯುವಕ ಜೋಡಿ ಎತ್ತಿನ ಗಾಡಿ ಸ್ಪರ್ಧೆಯಲ್ಲಿ, ಎತ್ತುಗಳನ್ನು ನೊಗ ಹಿಡಿದು ನಿಲ್ಲಿಸಲು ಯುವಕ ಮುಂದಾಗಿದ್ದಾನೆ. ಈ ವೇಳೆ, ನೊಗ ವೇಗವಾಗಿ ಯುವಕನ ತಲೆಗೆ ಬಡಿದಿದೆ. ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ. 

ಮಾರಕಾಸ್ತ್ರ ಹಿಡಿದು ಭಯಪಡಿಸುತ್ತಿದ್ದ ಯುವಕ ಅರೆಸ್ಟ್

ಇತ್ತ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ಭಯ ಹುಟ್ಟಿಸುತ್ತಿದ್ದ ಯುವಕನನ್ನ ಬಂಧಿಸಿದ್ದಾರೆ. ಮಿಳಘಟ್ಟದಲ್ಲಿ ಚಂದನ್ ಅಲಿಯಾಸ್ ಚೋಟು ಎಂಬಾತ ಬಂಧನಕ್ಕೊಳಗಾಗಿದ್ದಾನೆ. ಈತ, ಏರಿಯಾದಲ್ಲಿ ಮಾರಕಾಸ್ತ್ರ ಹಿಡಿದು ಜನರನ್ನು ಬೆದರಿಸ್ತಿರುವುದಾಗಿ ಆರೋಪ ಕೇಳಿಬಂದಿತ್ತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮಾರಕಾಸ್ತ್ರವನ್ನು ವಶಕ್ಕೆ ಪಡೆದಿದ್ದಾರೆ.  


   

ಇನ್ನಷ್ಟು ಸುದ್ದಿಗಳು 


 

 

Leave a Comment