ಶಾಸಕರ ಬೆಂಬಲಿಗನಿಗೆ ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದರಾ ಬೇಳೂರು ಆಪ್ತ? ಏನಿದು ಆರೋಪ? ಪ್ರತ್ಯಾರೋಪ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 27, 2023 GOOGLE NEWS


ಹೊಸನಗರ/ ಶಿವಮೊಗ್ಗ/  ಜಿಲ್ಲೆಯಲ್ಲಿ ಚುನಾವಣಾ ರಾಜಕಾರಣ ತೀವ್ರ ಪೈಪೋಟಿಯ ಜೊತೆಜೊತೆಗೆ ಅಸಮಾಧಾನದ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಪೂರಕವೆಂಬಂತೆ ಬೇಳೂರು ಗೋಪಾಲಕೃಷ್ಣರ ಆಪ್ತರಿಂದ ಹಲ್ಲೆಯತ್ನ ಹಾಗೂ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ಏನಿದು ಘಟನೆ

ಈ ಬಗ್ಗೆ ಹೊಸನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಾಲ್ಲೂಕು ವೀರಶೈವ ಪರಿಷತ್ತಿನ ಅಧ್ಯಕ್ಷ ಆನಂದ್ ಮಣಸೆ ಆರೋಪಿಸಿದ್ದಾರೆ. ಹರತಾಳು ಹಾಲಪ್ಪರ ಬೆಂಬಲಿಗ  ಚಿಕ್ಕಮಣತಿ ಅಭಿಲಾಷ್ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ, ಮಾಜಿ ಶಾಸಕರ ಆಪ್ತರೊಬ್ಬರು, ಅಭಿಲಾಷ್​ರ  ಬೈಕ್​ನ್ನ ಹಿಂಬಾಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು ಎಂದು ಆರೋಪಿಸಲಾಗಿದೆ. 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಇನ್ನೂ ಬಗ್ಗೆ ಮಾತನಾಡಿರುವ ಅಭಿಲಾಷ್​ ಸೋಮವಾರ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣಾ ಪ್ರಚಾರ ಮಾಡದಂತೆ ಧಮ್ಕಿ ಹಾಕಲಾಗಿದೆ.  ಸೂಕ್ತ ಸಾಕ್ಷಿಗಳ ಸಹಿತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ ಎಂದು ಸ್ತಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎಲ್ಲಾ ಸುಳ್ಳು ಎಲ್ಲಾ ಸುಳ್ಳು

ಇನ್ನೊಂದೆಡೆ  ಈ ಆರೋಪವೆಲ್ಲಾ ಸುಳ್ಳು, ಸತ್ಯಕ್ಕೆ ದೂರವಾದದ್ದು ಎಂದು ಕಾಂಗ್ರೆಸ್ ಪಕ್ಷದ ತಾಲೂಕು ಪ್ರಚಾರ ಉಸ್ತುವಾರಿ ಹರತಾಳು ಜಯಶೀಲಪ್ಪಗೌಡ ಹೇಳಿದ್ದಾರೆ.  ಇದೆಲ್ಲವೂ ಬಿಜೆಪಿಯ ಚುನಾವಣಾ ಪ್ರಚಾರದ ತಂತ್ರವಾಗಿದೆ. ಕ್ಷೇತ್ರದಲ್ಲಿ ಯಾವುದೇ ರೀತಿಯ ಜಾತಿ ವೈಷಮ್ಯ ಇಲ್ಲ. ಈಗ ಅದನ್ನು ಹುಟ್ಟು ಹಾಕಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ದೂರಿದ್ಧಾರೆ. 

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor