ಲಾಡ್ಜ್​ನಲ್ಲಿ ಗಂಡನನ್ನ ಲಾಕ್ ಮಾಡಿ ಹೆಂಡತಿ ಮಿಸ್ಸಿಂಗ್!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 27, 2023 GOOGLE NEWS


ಶಿವಮೊಗ್ಗ/  ಗಂಡನನ್ನ ಲಾಡ್ಜ್​ ರೂಂನಲ್ಲಿ ಲಾಕ್ ಮಾಡಿ ಹೆಂಡತಿ ನಾಪತ್ತೆಯಾದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ಆಗಿದ್ದು, ಎಫ್​ಐಆರ್ ದಾಖಲಾಗಿದೆ

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಏನಿದು ಘಟನೆ

ಹಾವೇರಿ ಮೂಲದ ವ್ಯಕ್ತಿಯೊಬ್ಬರು ತಮ್ಮ ಹೆಂಡತಿ ಜೊತೆಗೆ ಶಿವಮೊಗ್ಗಕ್ಕೆ ಬಂದಿದ್ದರು. ಇಲ್ಲಿಂದ ಲಕ್ಕವಳ್ಳಿಯಲ್ಲಿರುವ ಮಾವನ ಮನೆಗೆ ಹೋಗಿದ್ಧಾರೆ. ಆನಂತರ ಪತ್ನಿ ಹೇಳಿದ ಕಾರಣಕ್ಕೆ ಶಿವಮೊಗ್ಗ ನಗರದ ಬಸ್ ನಿಲ್ದಾಣ (shivamogga bus stand) ಬಳಿ ಇರುವ ಲಾಡ್ಜ್​ವೊಂದರಲ್ಲಿ ರೂಂ ಮಾಡಿದ್ದಾರೆ. 

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ರೂಮ್​ ಲಾಕ್ ಮಾಡಿ ಹೆಂಡತಿ ಮಿಸ್ಸಿಂಗ್

ಲಾಡ್ಜ್​ನಲ್ಲಿ ಸಂಜೆವರೆಗೂ ಗಂಡಹೆಂಡತಿ ಉಳಿದುಕೊಂಡಿದ್ಧಾರೆ. ಸಂಜೆ ಬಾತ್​ರೂಂಗೆ ಹೋಗಿ ಗಂಡ ವಾಪಸ್​ ಬರುವಷ್ಟರಲ್ಲಿ ಪತ್ನಿ ರೂಂನಿಂದ ಕಾಣೆಯಾಗಿದ್ದಾರೆ. ರೂಂ ಬಾಗಿಲನ್ನ ಹೊರಗಡೆಯಿಂದ ಲಾಕ್ ಮಾಡಿಕೊಂಡು ಪತ್ನಿ ಎಲ್ಲೋ ಹೋಗಿದ್ದಾರೆ. 

ಇದನ್ನು ಕೂಡ ಓದಿ- ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಬಳಿಕ ಲಾಡ್ಜ್​ ಸಹಾಯಕರಿಂದ ಕೀ ತೆಗೆಸಿ, ರೂಂನಿಂದ ಹೊರಬಂದ ಪತಿ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಈ ಸಂಬಂಧ ದೂರು ಕೊಟ್ಟಿದ್ಧಾರೆ.  ತಮ್ಮ ಮೊಬೈಲ್​ , ಪರ್ಸ್​ ಹಾಗೂ ಬ್ಯಾಗನ್ನು ಕೂಡ ತೆಗೆದುಕೊಂಡು ಪತ್ನಿ ಹೋಗಿದ್ದು, ಆಕೆಯನ್ನು ಹುಡುಕಿಕೊಡಿ ಎಂದು ಕಂಪ್ಲೆಂಟ್ ಮಾಡಿದ್ದಾರೆ. ಸದ್ಯ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸ್ತಿದ್ಧಾರೆ. 

 

Malenadutoday.com Social media

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor