SHIVAMOGGA | Jan 27, 2024 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು 16 ನೇ ಮೈಲಿಕಲ್ಲಿನ ಬಳಿ ಭೀಕರ ಅಪಘಾತ ಸಂಭವಿಸಿದೆ. ಈ ಭಾಗದಲ್ಲಿ ಮಂಡಗದ್ದೆ ಫಿಶ್ ಹೋಟೆಲ್ ಸಮೀಪ ಈ ಘಟನೆ ನಡೆದಿದೆ. ಸಂಜೆ ಆರು ಮುಕ್ಕಾಲುರ ಹೊತ್ತಿಗೆ ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದ್ದು ಮೃತರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಅವರ ಬಳಿ ಯಾವುದೇ ವಿವರ ಸ್ಥಳೀಯರಿಗೆ ಸಿಕ್ಕಿಲ್ಲ .ಬೈಕ್ನಲ್ಲಿದ್ದವರು. ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದರು.

ಇನ್ನೊಂದಡೆ ಶಿವಮೊಗ್ಗದ ಕಡೆಯಿಂದ ತೀರ್ಥಹಳ್ಳಿಗೆ ಸಹ್ಯಾದ್ರಿ ಬಸ್ ಬರುತ್ತಿತ್ತು. ಎದುರುಬದುರಾಗಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನೂ ಅಪಘಾತಕ್ಕೊಳಗಾದ ಬೈಕ್ನ ನಂಬರ್ ದಾವಣಗೆರೆ ರಿಜಿಸ್ಟ್ರೇಷನ್ ತೋರಿಸುತ್ತಿದ್ದು, KA 17EC 2519 ರಿಜಿಸ್ಟ್ರೇಷನ್ನ ಗಾಡಿಯ ಹಿಂಬದಿಯಲ್ಲಿ ದೊಡ್ಮನೆ ಎಂದು ಬರೆಯಲಾಗಿದೆ. ಮೃತರ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ.