ಅಪ್ಪ ಅಮ್ಮನ ಜಗಳದಿಂದ ಕೂಸು ಬಡವಾಯ್ತು ಎಂಬ ಗಾದೆ ಇಲ್ಲಿ ನಿಜವಾಯ್ತು ? 

ಹಂಚಿಕೊಳ್ಳಿ
WhatsApp Facebook X Telegram
Shimogga Akka Pade Rescues Girl
Shimogga Akka Pade Rescues Girl

ಶಿವಮೊಗ್ಗ: ಶಿಕಾರಿಪುರದಿಂದ ಮನೆ ಬಿಟ್ಟು ಬಂದು ಇಲ್ಲಿನ ಬಸ್‌ಸ್ಟ್ಯಾಂಡ್‌ನಲ್ಲಿ ಅಸಹಾಯಕಳಾಗಿ ನಿಂತಿದ್ದ ಹತ್ತು ವರ್ಷದ ಬಾಲಕಿಯನ್ನು ಶಿವಮೊಗ್ಗದ  ಅಕ್ಕ ಪಡೆ ಸಿಬ್ಬಂದಿಗಳು ರಕ್ಷಿಸಿ, ಪೋಷಕರ ವಶಕ್ಕೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

5 ದಿನ ಬಿಸಿಗಾಳಿ! ಹಲವೆಡೆ ಯುಲ್ಲೋ ಅಲರ್ಟ್!ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಮಳೆ! 

ಬಾಲಕಿಯ ಮನೆಯಲ್ಲಿ ತಂದೆ-ತಾಯಿ ನಡುವೆ ನಡೆಯುತ್ತಿದ್ದ ಜಗಳವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಪೋಷಕರು ಪರಸ್ಪರ ಕಿತ್ತಾಡುತ್ತಿರುವುದನ್ನು ಕಂಡು ಭಯಗೊಂಡ ಬಾಲಕಿ, ತನ್ನ ಮೇಲೂ ಹಲ್ಲೆ ನಡೆಯಬಹುದು ಎಂಬ ಆತಂಕದಿಂದ ಯಾರಿಗೂ ತಿಳಿಸದೆ ಮನೆ ಬಿಟ್ಟಿದ್ದಾಳೆ. ಅಲ್ಲಿಂದ ನೇರವಾಗಿ ಶಿವಮೊಗ್ಗ ಬಸ್‌ಸ್ಟ್ಯಾಂಡ್‌ಗೆ ಬಂದು ತಲುಪಿದ್ದಾಳೆ. 

ಬಸ್‌ಸ್ಟ್ಯಾಂಡ್‌ನಲ್ಲಿ ಒಬ್ಬಳೇ ಬೇಸರದಿಂದ ನಿಂತಿರುವುದನ್ನು ಗಮನಿಸಿದ ಗಸ್ತು ತಿರುಗುತ್ತಿದ್ದ ಅಕ್ಕ ಪಡೆ ಸಿಬ್ಬಂದಿಗಳು, ಕೂಡಲೇ ಬಾಲಕಿಯನ್ನು ವಿಚಾರಿಸಿ ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಶಿಕಾರಿಪುರ ಟೌನ್ ಪೊಲೀಸರ ಮೂಲಕ ಪೋಷಕರನ್ನು ಸಂಪರ್ಕಿಸಲಾಗಿದ್ದು, ಠಾಣೆಗೆ ಬಂದ ಪೋಷಕರು ಮಗಳನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದಿದ್ದಾರೆ.

Shimogga Akka Pade Rescues Girl
Shimogga Akka Pade Rescues Girl

Shimogga Akka Pade Rescues Girl

shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor