ಶಿವಮೊಗ್ಗ: ಕಾಲೇಜಿನ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ,  ಅಕ್ಕ ಪಡೆ ಬಂದ್ಮೇಲೆ ಏನಾಯ್ತು?

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ: ನಗರದ ಕಾಲೇಜೊಂದರ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಪುಂಡನೊಬ್ಬನಿಗೆ ಶಿವಮೊಗ್ಗ ಪೊಲೀಸರ ಅಕ್ಕ ಪಡೆ ಸರಿಯಾಗಿ ಬಿಸಿ ಮುಟ್ಟಿಸಿದೆ. ವಿದ್ಯಾರ್ಥಿನಿಯರ ರಕ್ಷಣೆಗಾಗಿ ಸದಾ ಸನ್ನದ್ಧವಾಗಿರುವ ಈ ವಿಶೇಷ ಮಹಿಳಾ ಪೊಲೀಸ್ ತಂಡ, ಸ್ಥಳಕ್ಕೇ ದೌಡಾಯಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಶಿವಮೊಗ್ಗ ನ್ಯೂ ಮಂಡ್ಲಿಯ ರೇಣುಕಾ ಸಾ ಮಿಲ್‌ನಲ್ಲಿ ಬೆಂಕಿ ಅವಘಡ

ಏಪ್ರಿಲ್ 13ರ ಮಧ್ಯಾಹ್ನ, ಕಾಲೇಜಿಗೆ ತೆರಳುತ್ತಿದ್ದ ಯುವತಿಯರೊಂದಿಗೆ ಅಪರಿಚಿತ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಅಕ್ಕ ಪಡೆಗೆ ಮಾಹಿತಿ ಲಭಿಸಿತ್ತು. ದೂರು ಬಂದ ಕೆಲವೇ ನಿಮಿಷಗಳಲ್ಲಿ ಕಾರ್ಯಾಚರಣೆ ನಡೆಸಿದ ಮಹಿಳಾ ಸಿಬ್ಬಂದಿ, ಪುಂಡಾಟಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. 

ಬಂಧಿತ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗಾಗಿ ನಗರದ ಕೋಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಮಹಿಳಾ ಸುರಕ್ಷತೆಯ ದೃಷ್ಟಿಯಿಂದ ಆತನ ಮೇಲೆ ಲಘು ಪ್ರಕರಣ ದಾಖಲಿಸಲಾಗಿದ್ದು, ಭವಿಷ್ಯದಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

Akka Pade detains man for harassing students 

Akka Pade Vehicle Rally Jio Tower Scam Shivamogga KFD Alert Collapse Canara Bank ತೀರ್ಥಹಳ್ಳಿ : ಬೈಕ್​ ತಗೊಂಡೋರು, ಕ್ಲಿಯರೆನ್ಸ್ ಲೆಟರ್​ ಕೇಳಿದ್ದಕ್ಕೆ ಏನೆಲ್ಲಾ ಆಯ್ತು ಓದಿ
Akka Pade
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor